'ನಿಮ್ಮ ಮೌನವನ್ನು ಇತಿಹಾಸ ತೀರ್ಮಾನ ಮಾಡುತ್ತದೆ':ಸೋನಿಯಾ ಗಾಂಧಿಗೆ ಕಂಗನಾ ರಾನಾವತ್ ಪ್ರಶ್ನೆ 

ಮಹಾರಾಷ್ಟ್ರ ಸರ್ಕಾರದಲ್ಲಿ ಮೈತ್ರಿಕೂಟವಾಗಿರುವ ಕಾಂಗ್ರೆಸ್ ತಮ್ಮ ವಿವಾದದಲ್ಲಿ ಮಧ್ಯೆ ಪ್ರವೇಶಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದಾರೆ.
ಕಂಗನಾ ರಾನಾವತ್
ಕಂಗನಾ ರಾನಾವತ್

ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ಮೈತ್ರಿಕೂಟವಾಗಿರುವ ಕಾಂಗ್ರೆಸ್ ತಮ್ಮ ವಿವಾದದಲ್ಲಿ ಮಧ್ಯೆ ಪ್ರವೇಶಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದಾರೆ.

ಮುಂಬೈಯಲ್ಲಿ ತಮ್ಮ ಕಟ್ಟಡವನ್ನು ಧ್ವಂಸಗೊಳಿಸಿ ಆಗಿರುವ ಸಮಸ್ಯೆಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸೋನಿಯಾ ಗಾಂಧಿಯವರು ಸಹಾಯ ಮಾಡಬೇಕು. ಒಬ್ಬ ಹೆಣ್ಣುಮಗಳಿಗೆ ಅನ್ಯಾಯ ಆಗುತ್ತಿರುವಾಗ ಸೋನಿಯಾ ಗಾಂಧಿಯವರು ಏಕೆ ಮಾತನಾಡುತ್ತಿಲ್ಲ, ಮೌನವಾಗಿದ್ದಾರೇಕೆ, ನಿಮ್ಮ ಮೌನವನ್ನು ಇತಿಹಾಸದಿಂದ ಅಳೆಯಬಹುದೇ, ಭಾರತದ ಸಂವಿಧಾನ ಮೌಲ್ಯಗಳನ್ನು ಕಾಪಾಡಲು, ಎತ್ತಿಹಿಡಿಯುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಅವರು ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದಾರೆ.

ಒಬ್ಬ ಹೆಣ್ಣಾಗಿ ನಿಮ್ಮದೇ ಮಹಾರಾಷ್ಟ್ರ ಸರ್ಕಾರ ನನಗೆ ನೀಡುತ್ತಿರುವ ಕಿರುಕುಳ, ಮಾಡುತ್ತಿರುವ ಅನ್ಯಾಯದ ಬಗ್ಗೆ ನೋಡಿಯೂ ಸುಮ್ಮನೆ ಕೂರಲು ಹೇಗೆ ಮನಸ್ಸು ಬರುತ್ತಿದೆ, ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ನಿಮ್ಮ ಸರ್ಕಾರಕ್ಕೆ ಹೇಳಲು ಸಾಧ್ಯವಿಲ್ಲವೇ ಎಂದು ಕಂಗನಾ ರಾನಾವತ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ವಾದ-ವಿವಾದಗಳಲ್ಲಿಯೇ ಕಂಗನಾ ರಾನಾವತ್ ಸುದ್ದಿಯಾಗಿದ್ದಾರೆ. ಅವರಿಗೆ ಕೇಂದ್ರ ಗೃಹ ಸಚಿವಾಲಯ ವೈ+ ಭದ್ರತೆಯನ್ನು ನೀಡಿದೆ. ಇಂದು ಬಾಳಾ ಸಾಹೇಬ್ ಠಾಕ್ರೆಯವರು ಇರುತ್ತಿದ್ದರೆ ಅವರ ಪಕ್ಷದ ಪರಿಸ್ಥಿತಿಗೆ ಇಂದು ಏನು ಅಂದುಕೊಳ್ಳುತ್ತಿದ್ದರು, ಬಾಳಾ ಸಾಹೇಬ್ ಅವರು ತಮ್ಮ ಪಕ್ಷ ಕೂಡ ಕಾಂಗ್ರೆಸ್ ಆಗಿ ಪರಿವರ್ತನೆಯಾಗಬಹುದು ಎಂಬ ಭಯ ಹೊಂದಿದ್ದರು ಎಂದು ಹೇಳಿ ಹಳೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com