ಮದುವೆಯಾಗಿ ತಿಂಗಳು ಕಳೆದಿಲ್ಲ, ಆಗಲೇ ಬಾಲಿವುಡ್ ಸೆಕ್ಸಿ ನಟಿ ಪೂನಂ ಪಾಂಡೆ ಪತಿ ಆರೆಸ್ಟ್!

ಇತ್ತೀಚಿಗೆ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಮದುವೆಯಾಗಿದ್ದ  ಶ್ಯಾಮ್ ಬಾಂಬೆ ಮಂಗಳವಾರ ಗೋವಾದಲ್ಲಿ ಆರೆಸ್ಟ್ ಆಗಿದ್ದಾರೆ. 

Published: 22nd September 2020 08:15 PM  |   Last Updated: 22nd September 2020 09:00 PM   |  A+A-


Poonam_Pandey_bombay_Sham1

ಪೂನಂ ಪಾಂಡೆ, ಶ್ಯಾಮ್ ಬಾಂಬೆ

Posted By : Nagaraja AB
Source : PTI

ಮುಂಬೈ: ಇತ್ತೀಚಿಗೆ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಮದುವೆಯಾಗಿದ್ದ ಶ್ಯಾಮ್ ಬಾಂಬೆ ಮಂಗಳವಾರ ಗೋವಾದಲ್ಲಿ ಆರೆಸ್ಟ್ ಆಗಿದ್ದಾರೆ. 

ತನ್ನ ಮೇಲೆ ಶ್ಯಾಮ್ ಬಾಂಬೆ ಹಲ್ಲೆ ನಡೆಸಿದ್ದು, ಕಿರುಕುಳ ನೀಡಿದ್ದಾರೆ ಎಂದು ಆಕೆ ದೂರು ಸಲ್ಲಿಸಿದ ನಂತರ ಶ್ಯಾಮ್ ಬಾಂಬೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಗೋವಾದ ಕ್ಯಾನಕೊನಾ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಆಕೆ ಚಿತ್ರೀಕರಣದಲ್ಲಿ ತೊಡಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತನ್ನ ಮೇಲೆ ಪತಿ ಶ್ಯಾಮ್ ಬಾಂಬೆ ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿರುವುದಾಗಿ ಸೋಮವಾರ ರಾತ್ರಿ ಪಾಂಡೆ ದೂರು ಸಲ್ಲಿಸಿದ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಕ್ಯಾನಾಕೊನಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತುಕರಾಂ ಚವಾಣ್ ತಿಳಿಸಿದ್ದಾರೆ. ಸಂತ್ರಸ್ಥೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

Stay up to date on all the latest ಬಾಲಿವುಡ್ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp