ಹಿಂದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ‘ಸ್ವಯಂ’ ಒಪ್ಪಿಕೊಂಡಿರುವ ಕಂಗನಾಗೆ ಸಮೆನ್ಸ್ ಏಕಿಲ್ಲ?: ಎನ್ ಸಿಬಿಗೆ ನಗ್ಮಾ ಪ್ರಶ್ನೆ

ಈ ಹಿಂದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಸ್ವಯಂ ಒಪ್ಪಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿ ಬಿ) ಏಕೆ ಸಮನ್ಸ್ ಜಾರಿಗೊಳಿಸಿಲ್ಲ ಎಂದು ಬಾಲಿವುಡ್ ಮತ್ತೊಬ್ಬ ಹಿರಿಯ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ ಪ್ರಶ್ನಿಸಿದ್ದಾರೆ.
ನಗ್ಮಾ - ಕಂಗನಾ
ನಗ್ಮಾ - ಕಂಗನಾ

ಮುಂಬೈ: ಈ ಹಿಂದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಸ್ವಯಂ ಒಪ್ಪಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿ ಬಿ) ಏಕೆ ಸಮನ್ಸ್ ಜಾರಿಗೊಳಿಸಿಲ್ಲ ಎಂದು ಬಾಲಿವುಡ್ ಮತ್ತೊಬ್ಬ ಹಿರಿಯ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ ಪ್ರಶ್ನಿಸಿದ್ದಾರೆ.

ಪ್ರಮುಖ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಅವರಿಗೆ ಎನ್ ಸಿ ಬಿ ಸಮನ್ಸ್ ಜಾರಿಗೊಳಿದೆ. ಈ ಹಿನ್ನಲೆಯಲ್ಲಿ ನಗ್ಮಾ ಟ್ವೀಟರ್ ಮೂಲಕ ಪ್ರತಿಕ್ರಯಿಸಿದ್ದಾರೆ.

ಹಿಂದೆ ತಾವೂ ಸಹ ಡ್ರಗ್ಸ್ ಸೇವನೆ ಮಾಡುತ್ತಿದ್ದೆ ಎಂಬುದನ್ನು ಕಂಗನಾ ರಣಾವತ್ ಒಪ್ಪಿಕೊಂಡಿದ್ದರೂ ಆಕೆಗೆ ಏಕೆ ಸಮನ್ಸ್ ಜಾರಿಗೊಳಿಸಿಲ್ಲ ಎಂದು ನಗ್ಮಾ ಪ್ರಶ್ನಿಸಿದ್ದಾರೆ.

ವಾಟ್ಸಾಪ್ ಚಾಟ್ ಆಧಾರದ ಮೇಲೆ ಬಾಲಿವುಡ್ ಹಲವು ಸಿನಿಮಾ ನಟಿಯರನ್ನು ವಿಚಾರಣೆಗೆ ಹಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಆದರೆ ಡಗ್ಸ್ ಸೇವೆನೆಯನ್ನು ಸ್ವಯಂ ಒಪ್ಪಿಕೊಂಡಿರುವ ಕಂಗನಾ ಅವರನ್ನು ಏಕೆ ವಿಚಾರಣೆಗೆ ಕರೆದಿಲ್ಲ? ಪ್ರಮುಖ ಸಿನಿಮಾ ತಾರೆಯರಿಗೆ ಸಂಬಂಧಿಸಿದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ ಅವರ ಇಮೇಜ್ ಹಾಳು ಮಾಡುವುದು ಎನ್ ಸಿಬಿ ಕರ್ತವ್ಯವೇ? ಎಂದು ನಗ್ಮಾ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com