ಅಂಗಾಂಗ ದಾನ ಮಾಡಲಿರುವ ಅಮಿತಾಬ್ ಬಚ್ಚನ್

ತಮ್ಮ ಅಂಗಾಂಗ ದಾನ ಮಾಡುವುದಾಗಿ ಬಾಲಿವುಡ್ ಸೂಪರ್‌ ಸ್ಟಾರ್ ಅಮಿತಾಬ್ ಬಚ್ಚನ್ ಘೋಷಿಸಿದ್ದಾರೆ.
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ತಮ್ಮ ಅಂಗಾಂಗ ದಾನ ಮಾಡುವುದಾಗಿ ಬಾಲಿವುಡ್ ಸೂಪರ್‌ ಸ್ಟಾರ್ ಅಮಿತಾಬ್ ಬಚ್ಚನ್ ಘೋಷಿಸಿದ್ದಾರೆ.

ಅಮಿತಾಬ್ ಬಚ್ಚನ್ ಈ ದಿನಗಳಲ್ಲಿ 'ಕೌನ್ ಬನೇಗಾ ಕರೋಡಪತಿ' ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ನೈಸರ್ಗಿಕ ವಿಪತ್ತು ಅಥವಾ ಯಾವುದೇ ಕಷ್ಟಕರ ಪರಿಸ್ಥಿತಿಯ ಸಂದರ್ಭಗಳಲ್ಲಿ ಅಮಿತಾಬ್ ಬಚ್ಚನ್ ಮುಂದೆ ಬಂದಿದ್ದಾರೆ. ಅಮಿತಾಬ್ ತಮ್ಮ ಅಂಗವನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.

77 ವರ್ಷದ ನಟ ತಮ್ಮ ಸೂಟ್‌ನಲ್ಲಿ ಹಸಿರು ಬಣ್ಣದ ರಿಬ್ಬನ್ ಇರಿಸಿಕೊಂಡಿದ್ದಾರೆ.

ಅಲ್ಲದೆ  "ಹಸಿರು ರಿಬ್ಬನ್" ನ ಮಹತ್ವವನ್ನು ವಿವರಿಸುವಾಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಅನುಭವಿ ನಟ  "ಪ್ರತಿಜ್ಞೆ ಮಾಡಿದ ಅಂಗ ದಾನಿ"  ಎಂದು ಹೇಳಿಕೊಂಡೊದ್ದಾರೆ. 

ಇನ್ನು ಸೂಪರ್‌ಸ್ಟಾರ್‌ನ ಅಭಿಮಾನಿಗಳು ಅವರ ಅಂಗಗಳನ್ನು ದಾನ ಮಾಡುವ ಪ್ರತಿಜ್ಞೆಯನ್ನು ಶ್ಲಾಘಿಸುವ ಮೂಲಕ ಹಲವಾರು ಕಾಮೆಂಟ್ ಗಳನ್ನು ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com