ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಬಳಿಕ ನಟ ಗೋವಿಂದಗೂ ಕೊರೋನಾ ಸೋಂಕು
ಬಾಲಿವುಡ್ ನ ಮತ್ತೊಬ್ಬ ನಾಯಕ ನಟ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ದಶಕದ ಹಿಂದಿನ ಸ್ಟಾರ್ ಹೀರೋ ಗೋವಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರ ಪತ್ನಿ ಸುನೀತಾ ದೃಢಪಡಿಸಿದ್ದಾರೆ.
Published: 04th April 2021 05:48 PM | Last Updated: 04th April 2021 05:52 PM | A+A A-

ಬಾಲಿವುಡ್ ನಟ ಗೋವಿಂದ (ಸಂಗ್ರಹ ಚಿತ್ರ)
ಮುಂಬೈ: ಬಾಲಿವುಡ್ ನ ಮತ್ತೊಬ್ಬ ನಾಯಕ ನಟ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ದಶಕದ ಹಿಂದಿನ ಸ್ಟಾರ್ ಹೀರೋ ಗೋವಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರ ಪತ್ನಿ ಸುನೀತಾ ದೃಢಪಡಿಸಿದ್ದಾರೆ.
ಗೋವಿಂದ ಅವರಿಗೆ ಕೊರೋನಾ ಸೋಂಕಿನ ಲಘು ಲಕ್ಷಣಗಳಿದ್ದು, ಪ್ರಸ್ತುತ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಗೋವಿಂದ ಅವರನ್ನು ಹೊರತುಪಡಿಸಿ ಕುಟುಂಬದ ಉಳಿದ ಸದಸ್ಯರಿಗೆ ನೆಗೆಟಿವ್ ವರದಿ ಬಂದಿದೆ ಎಂದು ಅವರು ಹೇಳಿದ್ದಾರೆ. ಸುನೀತಾ ಅವರೂ ಕೂಡಾ ಇತ್ತೀಚಿಗೆ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದಾರೆ.
ಸಾಕಷ್ಟು ಮುನ್ನೆಚ್ಚರಿಕೆಗಳ ಹೊರತಾಗಿಯೂ, ದುರದೃಷ್ಟವಶಾತ್ ಗೋವಿಂದ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಅವರು ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಗೋವಿಂದ ಅವರ ಅಧಿಕೃತ ಪ್ರತಿನಿಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಗೋವಿಂದ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು ಕೂಡಲೇ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದಾರೆ.ಬಾಲಿವುಡ್ ಸ್ಟಾರ್ ಹೀರೋಗಳಾದ ಅಕ್ಷಯ್ ಕುಮಾರ್, ಅಮೀರ್ ಖಾನ್ ಈಗಾಗಲೇ ಕೊರೋನಾ ಸೋಂಕಿಗೆ ತುತ್ತಾಗಾಗಿದ್ದಾರೆ.