ಪದ್ಮಶ್ರೀ ಪ್ರಶಸ್ತಿ ವಿಜೇತೆ ಹಿರಿಯ ಬಾಲಿವುಡ್ ನಟಿ ಶಶಿಕಲಾ ನಿಧನ

ಹಿರಿಯ ಬಾಲಿವುಡ್ ನಟಿ ಶಶಿಕಲಾ ಓಂ ಪ್ರಕಾಶ್ ಸೈಗಲ್ (88) ಭಾನುವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು

Published: 04th April 2021 08:22 PM  |   Last Updated: 04th April 2021 08:22 PM   |  A+A-


ಶಶಿಕಲಾ

Posted By : Raghavendra Adiga
Source : ANI

ಹಿರಿಯ ಬಾಲಿವುಡ್ ನಟಿ ಶಶಿಕಲಾ ಓಂ ಪ್ರಕಾಶ್ ಸೈಗಲ್ (88) ಭಾನುವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

'ಶಾರ್ಟ್' ನಟಿಯ ನಿಧನದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಅವರ ಕುಟುಂಬ ಸದಸ್ಯರಿಂದ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.

ಟಿವಿ ಕಾರ್ಯಕ್ರಮಗಳಾದ ಬಿಗ್ ಬಾಸ್ ಮತ್ತು ಖತ್ರೋನ್ ಕೆ ಖಿಲಾಡಿ ಚಿತ್ರಕಥೆಗಾಗಿ ಪ್ರಸಿದ್ಧರಾದ ಬಾಲಿವುಡ್ ಚಿತ್ರಕಥೆಗಾರ ಕಿರಣ್ ಕೊಟ್ರಿಯಲ್ ಅವರು ಫೇಸ್‌ಬುಕ್ ಪೋಸ್ಟ್ ಮೂಲಕ ನಟಿ ಶಶಿಕಲಾ ನಿಧನದ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

1932ರ ಆಗಸ್ಟ್ 4ರಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಜನಿಸಿದ ಶಶಿಕಲಾ ಪ್ರಸಿದ್ಧ ಟಿವಿ ಹಾಗೂ ಬಾಲಿವುಡ್ ನಟಿ. ಇವರು ನೂರಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. 'ಡಾಕು', 'ಜುಗ್ನು', 'ಆರತಿ', 'ಗುಮ್ರಾ', 'ಮುಜ್ಸೆ ಶಾದಿ ಕರೋಗೆ', 'ರಹಗೀರ್' ಚಿತ್ರಗಳಲ್ಲಿನ ಕೆಲವು ಪಾತ್ರಗಳಿಂದ ಅವರು ಹೆಸರಾಗಿದ್ದಾರೆ.

 ಚಲನಚಿತ್ರಗಳಲ್ಲದೆಸೋನ್ ಪರಿ ಮತ್ತು ಜೀನಾ ಇಸಿ ಕಾ ನಾಮ್ ಹೈ ಮತ್ತಿತರೆ ಕೆಲವು ಟಿವಿಕಾರ್ಯಕ್ರಮಗಳಲ್ಲಿಯೂ ಶಶಿಕಲಾ ಅಭಿನಯಿಸಿದ್ದಾರೆ.

ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಎಂಟು ಬಾರಿ ನಾಮನಿರ್ದೇಶನಗೊಂಡಿದ್ದ ನಟಿ 1962 ರ ಚಲನಚಿತ್ರ 'ಆರತಿ' ಮತ್ತು 1963 ರ 'ಗುಮ್ರಾ' ಚಿತ್ರಕ್ಕಾಗಿ ಎರಡು ಬಾರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘ ಪ್ರಶಸ್ತಿಯನ್ನೂ ಸಹ ಗಳಿಸಿದ್ದಾರೆ.  ಇದಲ್ಲದೆ ಶಶಿಕಲಾ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ 2007 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನವಾಗಿದ್ದರು. 

Stay up to date on all the latest ಬಾಲಿವುಡ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp