
ಕತ್ರಿನಾ ಕೈಫ್ (ಸಂಗ್ರಹ ಚಿತ್ರ)
ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮಹಾಮಾರಿ ಕೊರೊನಾ ವೈರಸ್ ಅಬ್ಬರ ಮತ್ತೆ ಹೆಚ್ಚಾಗಿದ್ದು, ಮಂಗಳವಾರ ಖ್ಯಾತ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿಗೂ ಪಾಸಿಟಿವ್ ದೃಢಪಟ್ಟಿದೆ.
''ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಕೂಡಲೆ ನಾನು ಇಸೋಲೇಟ್ ಆಗಿದ್ದು, ಹೋಮ್ ಕ್ವಾರಂಟೈನ್ ಆಗಿರುತ್ತೇನೆ. ವೈದ್ಯರ ಸಲಹೆ ಮೇರೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತೇನೆ. ನನ್ನ ಜೊತೆಗೆ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಆಭಾರಿ'' ಎಂದು 37 ವರ್ಷದ ಕತ್ರಿನಾ ಕೈಫ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ಗೆ ಕೊರೋನಾ ಕರಿ ನೆರಳು ಆವರಿಸಿದ್ದು, ನಟ ರಣ್ಬೀರ್ ಕಪೂರ್, ಆಮೀರ್ ಖಾನ್, ಅಕ್ಷಯ್ ಕುಮಾರ್, ಆಲಿಯಾ ಭಟ್, ಪರೇಶ್ ರಾವಲ್, ವಿಕ್ಕಿ ಕೌಶಲ್ ಅವರು ಸೇರಿದಂತೆ ಹಲವು ಬಾಲಿವುಡ್ ತಾರೆಯರಿಗೆ ಪಾಸಿಟಿವ್ ಬಂದಿದೆ.
ಸೋಮವಾರ ಮುಂಬೈನಲ್ಲಿ 9,857 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ದೇಶದ ವಾಣಿಜ್ಯ ನಗರಿಯ ಸೋಂಕಿತರ ಸಂಖ್ಯೆ 4,62,302ಕ್ಕೆ ಏರಿಕೆಯಾಗಿದೆ.