ಬಾಲಿವುಡ್ ನಟ ಅರ್ಜುನ್ ರಾಮ್'ಪಾಲ್, ನೀಲ್ ನಿತಿನ್ ಮುಖೇಶ್'ಗೆ ಕೊರೋನಾ ಪಾಸಿಟಿವ್

ಬಾಲಿವುಡ್ ನಟರಾದ ಅರ್ಜುನ್ ರಾಮ್'ಪಾಲ್ ಮತ್ತು ನೀಲ್ ನಿತಿನ್ ಮುಖೇಶ್'ಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

Published: 18th April 2021 12:53 PM  |   Last Updated: 18th April 2021 12:53 PM   |  A+A-


Actors Arjun Rampal and Neil Nitik Mukesh

ಅರ್ಜುನ್ ರಾಮ್'ಪಾಲ್ ಮತ್ತು ನೀಲ್ ನಿತಿನ್ ಮುಖೇಶ್

Posted By : Manjula VN
Source : The New Indian Express

ಮುಂಬೈ: ಬಾಲಿವುಡ್ ನಟರಾದ ಅರ್ಜುನ್ ರಾಮ್'ಪಾಲ್ ಮತ್ತು ನೀಲ್ ನಿತಿನ್ ಮುಖೇಶ್'ಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಸ್ವತಃ ರಾಮ್ ಪಾಲ್ ಹಾಗೂ ನೀಲ್ ನಿತಿನ್ ಮುಖೇಶ್ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ಟೀಟ್ ಮಾಡಿ ಮಾಹಿತಿ ನೀಡಿದ್ದಾರೆ. 

ನನ್ನ ಕೊರೋನಾ ಪರೀಕ್ಷೆ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಲಕ್ಷಣ ರಹಿತವಾಗಿದ್ದರೂ ಕೂಡ ನಾನು ಹೋಂ ಕ್ವಾರಂಟೈನ್ ನಲ್ಲಿದ್ದೇನೆ. ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲಾಗುತ್ತಿದೆ. ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇನೆ. ಕಳೆದ 10 ದಿನಗಳಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವೆರೆಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇದು ಅತ್ಯಂತ ಆತಂಕದ ಸಮಯವಾಗಿದೆ. ಆದರೆ, ನಾವು ಜಾಗರೂಕತೆಯಿಂದ ಇರಬೇಕು. ಒಗ್ಗೂಡಿ ನಿಯಮ ಪಾಲನೆ ಮಾಡಿದರೆ, ಕೊರೋನಾ ವಿರುದ್ಧ ಹೋರಾಡಬಹುದು ಎಂದು ರಾಮ್'ಪಾಲ್ ಅವರು ಹೇಳಿದ್ದಾರೆ. 

ಇದರಂತೆ ನೀಲ್ ನಿತಿನ್ ಮುಖೇಶ್ ಅವರು ಟ್ವೀಟ್ ಮಾಡಿ, ಮನೆಯಲ್ಲಿಯೇ ಇದ್ದೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ನನ್ನ ಕುಟುಂಬ ಹಾಗೂ ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಇದೀಗ ನಾವೆಲ್ಲರೂ ಹೋಂ ಕ್ವಾರಂಟೈನ್ ನಲ್ಲಿದ್ದೇವೆ. ವೈದ್ಯರ ಸಲಹೆಯಂತೆ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದೇವೆಂದು ತಿಳಿಸಿದ್ದಾರೆ.

Stay up to date on all the latest ಬಾಲಿವುಡ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp