ಕೋವಿಡ್-19 ಯುವತಿಗೆ ವಿಶೇಷ ಚಿಕಿತ್ಸೆಗಾಗಿ ನಾಗ್ಪುರದಿಂದ ಹೈದ್ರಾಬಾದ್ ಗೆ ಏರ್ ಲಿಫ್ಟ್ ಮಾಡಿದ ಸೋನು ಸೂದ್!

ಈಗಷ್ಟೇ ಕೊರೋನಾದಿಂದ ಚೇತರಿಸಿಕೊಂಡಿರುವ ಬಾಲಿವುಡ್ ನಟ ಹಾಗೂ ಲೋಕೋಪಕಾರಿ ಸೋನು ಸೂದ್, ಶುಕ್ರವಾರ ಕೋವಿಡ್ -19 ಸೋಂಕಿತ ಯುವತಿಯನ್ನು ವಿಶೇಷ ಚಿಕಿತ್ಸೆಗಾಗಿ ನಾಗ್ಪುರದಿಂದ ಹೈದ್ರಾಬಾದ್ ಗೆ ಏರ್ ಲಿಫ್ಟ್ ಮಾಡಿದ್ದಾರೆ.
ನಟ ಸೋನು ಸೂದ್
ನಟ ಸೋನು ಸೂದ್

ನವದೆಹಲಿ: ಈಗಷ್ಟೇ ಕೊರೋನಾದಿಂದ ಚೇತರಿಸಿಕೊಂಡಿರುವ ಬಾಲಿವುಡ್ ನಟ ಹಾಗೂ ಲೋಕೋಪಕಾರಿ ಸೋನು ಸೂದ್, ಶುಕ್ರವಾರ ಕೋವಿಡ್ -19 ಸೋಂಕಿತ ಯುವತಿಯನ್ನು ವಿಶೇಷ ಚಿಕಿತ್ಸೆಗಾಗಿ ನಾಗ್ಪುರದಿಂದ ಹೈದ್ರಾಬಾದ್ ಗೆ ಏರ್ ಲಿಫ್ಟ್ ಮಾಡಿದ್ದಾರೆ.

ಕೋವಿಡ್ ನಿಂದ ಈಗಾಗಲೇ ಶೇ. 85ರಿಂದ 90 ರಷ್ಟು ಶ್ವಾಸಕೋಶಗಳನ್ನು ಕಳೆದುಕೊಂಡಿರುವ 25 ವರ್ಷದ ಯುವತಿ ಭಾರ್ತಿಯನ್ನು ಸೋನು ಸೂದ್ ನೆರವಿನಿಂದ ನಾಗ್ಪುರದ ವೋಕ್ಹಾರ್ಡ್ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಆಕೆಗೆ ಶ್ವಾಸಕೋಶದ ಕಸಿ ಅಥವಾ ವಿಶೇಷ ಚಿಕಿತ್ಸೆಯ ಅಗತ್ಯವಿದ್ದು, ಹೈದ್ರಾಬಾದಿನ ಅಪೊಲೋ  ಆಸ್ಪತ್ರೆಯಲ್ಲಿ ಮಾತ್ರ ಈ ಚಿಕಿತ್ಸೆ  ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಕೂಡಲೇ  ಅಪೊಲೋ ಆಸ್ಪತ್ರೆಯ ನಿರ್ದೇಶಕರೊಂದಿಗೆ  ಸೋನು ಸೂದ್ ಸಂಪರ್ಕ ಸಾಧಿಸಿದ್ದಾರೆ. ಆಕೆಗೆ ಇಸಿಎಂಒ ಎಂಬ ವಿಶೇಷ ಚಿಕಿತ್ಸೆ ಬೇಕಾಗಿದೆ  ಎಂದು ತಿಳಿದುಬಂದಿದೆ, ಇದರಲ್ಲಿ ಶ್ವಾಸಕೋಶದಿಂದ ಒತ್ತಡವನ್ನು ದೂರವಿರಿಸಲು ದೇಹಕ್ಕೆ ಕೃತಕವಾಗಿ ರಕ್ತವನ್ನು ಪಂಪ್ ಮಾಡಲಾಗುತ್ತದೆ. ಇದಕ್ಕಾಗಿ ಹೈದ್ರಾಬಾದ್ ನಿಂದ ಆರು ವೈದ್ಯರು ಒಂದು ದಿನ ಮುಂಚಿತವಾಗಿ ಬಂದು ಎಲ್ಲಾ ವ್ಯವಸ್ಥೆ ಮಾಡಿ,  ಏರ್ ಲಿಫ್ಟ್ ಮಾಡಲಾಗಿದೆ. ಇದರಿಂದಾಗಿ ಕಡಿಮೆ ಸಮಯದಲ್ಲಿ ಭಾರ್ತಿ ಉತ್ತಮ ಚಿಕಿತ್ಸೆ ಪಡೆಯುವಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೋನು ಸೂದ್,  ಆಕೆ ಇನ್ನೂ 25 ವರ್ಷದ ಯುವತಿಯಾಗಿದ್ದು, ಕೋವಿಡ್-19 ವಿರುದ್ಧ ಧೈರ್ಯದಿಂದ ಹೋರಾಡಿ, ಅದರಿಂದ ಹೊರಗೆ ಬರಲಿದ್ದಾರೆ. ಅದಕ್ಕಾಗಿ ಏರ್ ಲಿಫ್ಟ್ ಮಾಡಲು ನಿರ್ಧರಿಸಲಾಯಿತು. ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಶೀಘ್ರದಲ್ಲಿಯೇ ಆಕೆ ಗುಣಮುಖರಾಗಲಿದ್ದಾರೆ ಎಂದಿದ್ದಾರೆ, 

 ಈ ರೀತಿ ಕೋವಿಡ್-19 ರೋಗಿಯನ್ನು ಏರ್ ಲಿಫ್ಟ್ ಮಾಡಿದದ್ದು ಇದೇ ಮೊದಲ ಪ್ರಕರಣವಾಗಿದೆ. ಭಾರ್ತಿ ತಂದೆ ನಿವೃತ್ತ ರೈಲ್ವೆ ಅಧಿಕಾರಿಯಾಗಿದ್ದು, ಅನೇಕ ಜನರ ಪ್ರಾರ್ಥನೆ ಅವರ ಕುಟುಂಬದ ಮೇಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com