
ಪೂಜಾ ಹೆಗಡೆ
ನಟಿ ಪೂಜಾ ಹೆಗ್ಡೆಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಬಗ್ಗೆ ನಟಿ ಪೂಜಾ ಹೆಗ್ಡೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.
ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಎಲ್ಲ ನಿಯಮಗಳನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ಮನೆಯಲ್ಲೇ ನಾನು ಕ್ವಾರಂಟೈನ್ ಆಗಿದ್ದೇನೆ. ನನ್ನ ಜೊತೆ ಸಂಪರ್ಕಕ್ಕೆ ಬಂದವರು ಕೂಡಲೆ ಪರೀಕ್ಷೆಗೆ ಒಳಗಾಗಿ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ನನ್ನ ಧನ್ಯವಾದಗಳು. ದಯವಿಟ್ಟು ಮನೆಯಲ್ಲಿರಿ, ಸುರಕ್ಷಿತವಾಗಿರಿ'' ಎಂದು ನಟಿ ಪೂಜಾ ಹೆಗ್ಡೆ ಟ್ವೀಟ್ ಮಾಡಿದ್ದಾರೆ.
ಕಾಲಿವುಡ್ ನಟ ಇಳಯದಳಪತಿ ವಿಜಯ್ ಅಭಿನಯದ 65ನೇ ಸಿನಿಮಾ (ದಳಪತಿ 65)ಕ್ಕೆ ಪೂಜಾ ಹೆಗ್ಡೆ ನಾಯಕಿ. ಈಗಾಗಲೇ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ದಳಪತಿ 65' ಚಿತ್ರದ ಮೊದಲ ಹಂತದ ಶೂಟಿಂಗ್ ಜಾರ್ಜಿಯಾದಲ್ಲಿ ನಡೆದಿದೆ. 17 ದಿನಗಳ ಕಾಲ ಜಾರ್ಜಿಯಾದಲ್ಲಿ ಚಿತ್ರೀಕರಣ ಮುಗಿಸಿದ ಬಳಿಕ ವಿಜಯ್ ಚೆನ್ನೈಗೆ ವಾಪಸ್ ಬಂದಿದ್ದಾರೆ.