ಖ್ಯಾತ ಹಿಂದಿ ಕಿರುತೆರೆ ನಟ ಅನುಪಮ್ ಶ್ಯಾಮ್ ನಿಧನ

ಖ್ಯಾತ ಹಿಂದಿ ಕಿರುತೆರೆ ನಟ ಅನುಪಮ್ ಶ್ಯಾಮ್ ಅವರು ನಿನ್ನೆ ತಡರಾತ್ರಿ ನಿಧನರಾಗಿದ್ದು, ಅವರಿಗೆ 63 ವರ್ಷ ವಯಸ್ಸಾಗಿತ್ತು.
ನಟ ಅನುಪಮ್ ಶ್ಯಾಮ್
ನಟ ಅನುಪಮ್ ಶ್ಯಾಮ್

ಮುಂಬೈ: ಖ್ಯಾತ ಹಿಂದಿ ಕಿರುತೆರೆ ನಟ ಅನುಪಮ್ ಶ್ಯಾಮ್ ಅವರು ನಿನ್ನೆ ತಡರಾತ್ರಿ ನಿಧನರಾಗಿದ್ದು, ಅವರಿಗೆ 63 ವರ್ಷ ವಯಸ್ಸಾಗಿತ್ತು.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು 4 ದಿನಗಳ ಹಿಂದೆ ಮುಂಬೈನ ಸಬ್ ಅರ್ಬನ್ ಗೋರೆಗಾಂವ್ ನಲ್ಲಿರುವ ಲೈಫ್ ಲೈನ್ ಆಸ್ಪತ್ರೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಇನ್ನು ನಟ ಅನುಪಮ್ ಶ್ಯಾಮ್ ಅವರ ನಿಧನಕ್ಕೆ ಹಿಂದಿ ಕಿರುತೆರೆ ನಟನಟಿಯರು ಕಂಬನಿ ಮಿಡಿದಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಯಶ್ ಪಾಲ್ ಶರ್ಮಾ ಅವರು, 'ಅವರು ಇನ್ನಿಲ್ಲ ಎಂಬುದೇ ಅತ್ಯಂತ ದುಃಖಕರ ವಿಷಯ. ವಿಚಾರ ತಿಳಿದ ಕೂಡಲೇ ನಾನು ಆಸ್ಪತ್ರೆಗೆ ದೌಡಾಯಿದೆ. ನಾನು ಇಲ್ಲಿಗೆ ಬಂದಾಗ ಅವರಿನ್ನೂ ಉಸಿರಾಡುತ್ತಿದ್ದರು. ಬಳಿಕ ವೈದ್ಯರು ಅವರು ಇನ್ನಿಲ್ಲ ಎಂದು ಹೇಳಿದರು.  ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ನಟ ಅನುಪಮ್ ಶ್ಯಾಮ್ ಸಕ್ಕರೆ ಖಾಯಿಲೆ. ಬಿಪಿ ಮತ್ತು ಇತರೆ ಅನಾರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಚಿತ್ರೀಕರಣದ ಸಮಯದಲ್ಲಿ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com