ಬಾಲಿವುಡ್ ಪಾರ್ಟಿಗಳಲ್ಲಿ ನಕಲಿತನವೇ ಹೆಚ್ಚು; ನಕಲಿಗಳ ನಡುವೆ ಇರಲು ಇಷ್ಟವಿಲ್ಲ ಎಂದ ನವಾಜುದ್ದೀನ್ ಸಿದ್ಧಿಕಿ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಸಹಜ ಅಭಿನಯದಿಂದಲೇ ಸಾವಿರಾರು ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ವರ್ಷ ಸಿರಿಯಸ್ ಮೆನ್ ಮತ್ತು ರಾತ್ ಅಕೇಲಿ ಹೈ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Published: 31st December 2021 07:50 PM  |   Last Updated: 31st December 2021 07:50 PM   |  A+A-


Nawazuddin Siddiqui

ನವಾಜುದ್ದೀನ್ ಸಿದ್ಧಿಕಿ

Online Desk

ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಸಹಜ ಅಭಿನಯದಿಂದಲೇ ಸಾವಿರಾರು ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ವರ್ಷ ಸಿರಿಯಸ್ ಮೆನ್ ಮತ್ತು ರಾತ್ ಅಕೇಲಿ ಹೈ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ನೆಟ್‍ಫ್ಲಿಕ್ಸ್ ಚಲನಚಿತ್ರ ಸಿರಿಯಸ್ ಮೆನ್‍ನಲ್ಲಿನ ಪಾತ್ರಕ್ಕಾಗಿ ನವಾಜುದ್ದೀನ್ ಸಿದ್ದಿಕಿ ಈ ವರ್ಷ ಅಂತರರಾಷ್ಟ್ರೀಯ ಎಮ್ಮಿಗೆ ನಾಮನಿರ್ದೇಶನಗೊಂಡರು. ಈ ವೇಳೆ 2022ರಲ್ಲಿನ ತಮ್ಮ ಪ್ರಾಜೆಕ್ಟ್‍ಗಳ ಬಗ್ಗೆ ಮಾತನಾಡುತ್ತಾ, 2022ರಲ್ಲಿ ಐದು ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.

ಇದನ್ನು ಓದಿ: ಒಟಿಟಿ ಜನಪ್ರಿಯ ನಟ, ನಟಿಯರು: ಟಾಪ್‌ 10 ಪಟ್ಟಿಯಲ್ಲಿ ಸಮಂತಾ, ರಾಧಿಕಾ ಆಪ್ಟೆ, ತಮನ್ನಾ​

ಇನ್ನು ಜನಪ್ರಿಯತೆಯಿಂದ ಸದಾ ದೂರ ಉಳಿಯುವ ನವಾಜುದ್ದೀನ್ ಸಿದ್ದೀಕಿ, ಎಲ್ಲಾ ರಾಜ್ಮತಾಜ್ ಅಂದರೆ ದೊಡ್ಡ ದೊಡ್ಡ ಪಾರ್ಟಿಗಳಿಂದ ದೂರು ಉಳಿಯಲು ಕಾರಣವೇನು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.

ನಾನು ಚಲನಚಿತ್ರದಲ್ಲಿ ಆಯ್ಕೆ ಮಾಡಿಕೊಳ್ಳುವ ರೀತಿಯಲ್ಲೇ ನೈಜ ಬದುಕಿನಲ್ಲೂ ಬದುಕುತ್ತಿದ್ದೇನೆ. ನನ್ನ ಪಾತ್ರಗಳು ನೈಜ, ಸಹಜತೆಯಿಂದ ಕೂಡಿವೆ. ನಾನು ಸ್ಥಳೀಯ ವ್ಯಕ್ತಿ, ಆದರೆ ಜಾಗತಿಕವಾಗಿರುತ್ತೇನೆ. ನೀವು ನಿಮ್ಮ ತತ್ವ, ಸಿದ್ಧಾಂತಗಳಿಗೆ ಅಂಟಿಕೊಂಡರೆ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಹೇಳಿದರು.

ನನ್ನ ಮನಸ್ಥಿತಿಯಲ್ಲೂ ಸಿನಿಮಾಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಪಾತ್ರದಲ್ಲೂ ಯಾವ ವ್ಯತ್ಯಾಸವೂ ಇರುವುದಿಲ್ಲ. ನನ್ನಲ್ಲಿ ನಕಲಿತನ ಇಲ್ಲ. ಹಾಗಾಗಿ ನಾನು ನಕಲಿ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ನನಗೆ ಸ್ಟಾರ್ ಡಮ್, ಗ್ಲಾಮರ್ ಸಿನಿಮಾಗಳಲ್ಲಿ ಅಭಿನಯಿಸಲು ಇಷ್ಟವಿಲ್ಲ. ನಾನು ಚಿತ್ರರಂಗದ ಸಮಾರಂಭಗಳು ಅಥವಾ ಪಾರ್ಟಿಗಳಲ್ಲಿ ಭಾಗವಹಿಸುವುದಕ್ಕಿಂತ ಸಾಮಾನ್ಯ ಜನರ ನಡುವೆ ಬದುಕಲು ಇಷ್ಟಪಡುತ್ತೇನೆ. ನಾನು ಅಲ್ಲಿ ಬಹಳಷ್ಟು ಬೂಟಾಟಿಕೆಗಳು, ನಕಲಿತನಗಳನ್ನು ಕಾಣುತ್ತೇನೆ. ಇಂತಹ ಬೂಟಾಟಿಕೆ, ನಕಲಿತನಗಳ ನಡುವೆ ಇರಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.


Stay up to date on all the latest ಬಾಲಿವುಡ್ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp