ನಿಯಮ ಉಲ್ಲಂಘನೆ: ಕಂಗನಾ ರಣಾವತ್ ರ ಎರಡು ಟ್ವೀಟ್ ಡಿಲೀಟ್ ಮಾಡಿದ ಟ್ವೀಟರ್!

ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಿದ್ದ ಎರಡು ಟ್ವೀಟ್ ಗಳನ್ನು ಟ್ವಿಟರ್ ಇಂಡಿಯಾ ಗುರುವಾರ ಡಿಲೀಟ್ ಮಾಡಿದೆ. 

Published: 04th February 2021 05:15 PM  |   Last Updated: 04th February 2021 05:15 PM   |  A+A-


Bollywood_actress_Kangana_Ranaut1

ಬಾಲಿವುಡ್ ನಟಿ ಕಂಗನಾ ರಣಾವತ್

Posted By : Nagaraja AB
Source : The New Indian Express

ನವದೆಹಲಿ: ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಿದ್ದ ಎರಡು ಟ್ವೀಟ್ ಗಳನ್ನು ಟ್ವಿಟರ್ ಇಂಡಿಯಾ ಗುರುವಾರ ಡಿಲೀಟ್ ಮಾಡಿದೆ. 

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಯನ್ನು ಕುರಿತು ಕಂಗನಾ ಟ್ವೀಟ್ ಮಾಡಿದ್ದರು. ಮತ್ತೊಂದು ಟ್ವೀಟ್ ನಲ್ಲಿ ದೇಶದಂದ ಕ್ಯಾನ್ಸರ್ ಮುಕ್ತಗೊಳಿಸುವ ಬಗ್ಗೆ ಕಂಗನಾ ಮಾತನಾಡಿದ್ದರು. ಟ್ವೀಟರ್ ಕಂಗನಾ ವಿರುದ್ಧ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲೇನಲ್ಲಾ.

ಕಳೆದ ತಿಂಗಳು ಅಮೆಜಾನ್ ಪ್ರೈಮ್ ವಿಡಿಯೋ ಧಾರಾವಾಹಿ 'ತಾಂಡಾವ' ಸುತ್ತಲಿನ ವಿವಾದ ಕುರಿತಂತೆ ಕಂಗನಾ ಮಾಡಿದ್ದ ಫೋಸ್ಟ್ ವೊಂದನ್ನು ಸಹ ಡಿಲೀಟ್ ಮಾಡಲಾಗಿತ್ತು.

ಹಾಲಿವುಡ್ ಗಾಯಕಿ ರಿಹಾನ್ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ನಂತರ ಮಂಗಳವಾರದಿಂದಲೂ ಪೋಸ್ಟ್ ಮಾಡುವ ಮೂಲಕ ರಣಾವತ್ ಟ್ವೀಟರ್ ನಲ್ಲಿ ಸಕ್ರಿಯರಾಗಿದ್ದರು.ನಟಿ ತಾಪ್ಸಿ ಪನ್ನು ರೈತರ ಹೋರಾಟ ಕುರಿತು ಮಾಡಿದ್ದ ಟ್ವೀಟ್ ಗೆ ಕಂಗನಾ ಊರಿದುಕೊಂಡಿದ್ದರು.

“ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರ ಪ್ರೊಪಗಾಂಡಾ ಪಾಠ ಮಾಡಲು ಬರಬೇಡಿ” ಎಂದು ನಟಿ ತಾಪ್ಸಿ ಟ್ವೀಟ್ ಮಾಡಿದ್ದಾರೆ.


Stay up to date on all the latest ಬಾಲಿವುಡ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp