ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ: ಅಕ್ಷಯ್ ಉತ್ತಮ ನಟ, ದೀಪಿಕಾ ಉತ್ತಮ ನಟಿ, ಸುಶಾಂತ್ ಗೆ ಮರಣೋತ್ತರ ಗೌರವ

ಈ ವರ್ಷದ "ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ" ಘೋಷಣೆಯಾಗಿದೆ. ನಟಿ ದೀಪಿಕಾ ಪಡುಕೋಣೆ, ಸುಶ್ಮಿತಾ ಸೇನ್ ಮತ್ತು ನಟರಾದ ಅಕ್ಷಯ್ ಕುಮಾರ್ ಹಾಗೂ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರುಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

Published: 21st February 2021 11:03 PM  |   Last Updated: 21st February 2021 11:03 PM   |  A+A-


ಅಕ್ಷಯ್ ಕುಮಾರ್ ಸುಶಾಂತ್ ಸಿಂಗ್ ರಜಪೂತ್ ದೀಪಿಕಾ ಪಡುಕೋಣೆ ಸುಷ್ಮಿತಾ ಸೇನ್'

Posted By : Raghavendra Adiga
Source : Online Desk

ಈ ವರ್ಷದ "ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ" ಘೋಷಣೆಯಾಗಿದೆ. ನಟಿ ದೀಪಿಕಾ ಪಡುಕೋಣೆ, ಸುಶ್ಮಿತಾ ಸೇನ್ ಮತ್ತು ನಟರಾದ ಅಕ್ಷಯ್ ಕುಮಾರ್ ಹಾಗೂ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರುಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

"ಚಪಾಕ್" ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಉತ್ತಮ ನಟಿ ಪ್ರಶಸ್ತಿಗೆ ಭಾಜನವಾಗಿದ್ದಾರೆ.

ಅಕ್ಷಯ್ ಕುಮಾರ್ ತಮ್ಮ "ಲಕ್ಷ್ಮಿ" ಚುಇತ್ರದ ಅಭಿನಯಕ್ಕಾಗಿ ಉತ್ತಮ ನಟ ಪುರಸ್ಕಾರಕ್ಕೆ ಭಾಜನವಾಗಿದ್ದಾರೆ.

ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿಗೆ "ಗಿಲ್ಲಿ" ಚಿತ್ರದ ಅಭಿನಯಕ್ಕಾಗಿ ಕಿಯಾರಾ ಅಡ್ವಾಣಿ ಆಯ್ಕೆಯಾದರೆ ವಿಮರ್ಶಕರ ಉತ್ತಮ ನಟರಾಗಿ ಸುಶಾಂತ್ ಸಿಂಗ್ ರಜಪೂತ್ ಆಯ್ಕೆಯಾಗಿದ್ದು ಅವರ ಅಭಿನಯದ "ಚಿಚೋರೆ" ಸಿನಿಮಾ ಅಭಿನಯಕ್ಕೆ ಈ ಪುರಸ್ಕಾರ ಲಭಿಸಿದೆ.

 

 

ಇನ್ನು ಅತ್ಯುತ್ತಮ ಚಿತ್ರ "ತಾನಾಜಿ" ಆಗಿದರೆ ಉತ್ತಮ ವಿದೇಶೀ ಫೀಚರ್ ಚಿತ್ರ ಪ್ರಶಸ್ತಿ  "ಪ್ಯಾರಾಸೈಟ್"" ಪಾಲಾಗಿದೆ. ಅನುರಾಗ್ ಬಸು ತಮ್ಮ "ಲುಡೋ" ಚಿತ್ರದ ನಿರ್ದೇಶನಕ್ಕಾಗಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪುರಸ್ಕಾರ ನೀಡಿ ಗೌರವಿಸಲಾಗಿದೆ. 

Stay up to date on all the latest ಬಾಲಿವುಡ್ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp