ಅಮಿತಾಬ್, ಇಮ್ರಾನ್ ಹಶ್ಮಿ ಅಭಿನಯದ 'ಚೆಹ್ರೆ' ಏಪ್ರಿಲ್ ಗೆ ಬಿಡುಗಡೆ: ಪೋಸ್ಟರ್ ನಲ್ಲಿ ರಿಯಾ ಚಕ್ರವರ್ತಿ ಮಿಸ್ಸಿಂಗ್!

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ನಟ ಇಮ್ರಾನ್ ಹಶ್ಮಿ ಅಭಿನಯದ ನಿಗೂಢ ಕುತೂಹಲದ 'ಚೆಹ್ರೆ' ಚಿತ್ರ ಏಪ್ರಿಲ್ ನಲ್ಲಿ ಥಿಯೇಟರ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

Published: 23rd February 2021 03:29 PM  |   Last Updated: 23rd February 2021 04:47 PM   |  A+A-


Chehre_poster_and_R_Rhea_Chakraborty1

ಚೆಹ್ರೆ ಪೋಸ್ಟರ್, ರಿಯಾ ಚಕ್ರವರ್ತಿ

Posted By : Nagaraja AB
Source : The New Indian Express

ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ನಟ ಇಮ್ರಾನ್ ಹಶ್ಮಿ ಅಭಿನಯದ ನಿಗೂಢ ಕುತೂಹಲದ 'ಚೆಹ್ರೆ' ಚಿತ್ರ ಏಪ್ರಿಲ್ ನಲ್ಲಿ ಥಿಯೇಟರ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ರೂಮಿ ಜಾಫ್ರಿ ನಿರ್ದೇಶನದ ಈ ಚಿತ್ರದಲ್ಲಿ ಆನು ಕಪೂರ್, ಕ್ರಿಸ್ಟಲ್ ಡಿಸೋಜಾ, ದ್ರಿತಿಮನ್ ಚಕ್ರವರ್ತಿ, ರಘುಬೀರ್ ಯಾದವ್, ಸಿದ್ಧಾರ್ಥ ಕಪೂರ್, ಮತ್ತು ನಟಿ ರಿಯಾ ಚಕ್ರವರ್ತಿ ನಟಿಸಿದ್ದಾರೆ.

 ಆದಾಗ್ಯೂ,  ಹಶ್ಮಿ  ಹೊಸದಾಗಿ ಬಿಡುಗಡೆ ಮಾಡಿರುವ ಚಿತ್ರದ ಪೋಸ್ಟರ್‌ ಮತ್ತು  ತಾರಾಗಣದ ಪಟ್ಟಿಯಲ್ಲಿ ರಿಯಾ ಚಕ್ರವರ್ತಿ ನಾಪತ್ತೆಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 

2019ರಲ್ಲಿ ರಿಯಾ ಚಕ್ರವರ್ತಿ ಚಿತ್ರದ ಫಸ್ಟ್ ಲುಕ್ ನ್ನು ಶೇರ್ ಮಾಡಿಕೊಂಡಿದ್ದರು. ಆದರೆ, ಆಕೆಯ ಬಾಯ್ ಫ್ರೆಂಡ್ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಡ್ರಕ್ಸ್ ತನಿಖೆಯಲ್ಲಿ ಬಂಧನವಾಗಿ ಕಳೆದ ವರ್ಷ ಆಕ್ಟೋಬರ್ ತಿಂಗಳಿನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಚೆಹ್ರೆ ಚಿತ್ರದಲ್ಲಿ ರಿಯಾ ಚಕ್ರವರ್ತಿ ಕೂಡಾ ಇದ್ದಾರೆಯೇ? ಅಥವಾ ಅವರನ್ನು ತೆಗೆದುಹಾಕಲಾಗಿದೆಯೇ ?ಎಂಬುದು ಸ್ಪಷ್ಟವಾಗಿಲ್ಲ.

ಆನಂದ್ ಪಂಡಿತ್ ಮೋಷನ್ ಪಿಕ್ಟರ್ಸ್ ಮತ್ತು ಸರಸ್ವತಿ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಚೆಹ್ರೆ ಚಿತ್ರದ ಬೆಂಬಲಕ್ಕೆ ನಿಂತಿದೆ. ಈ ಚಿತ್ರ ಜುಲೈ 2020ರಲ್ಲಿಯೇ ಬಿಡುಗಡೆಯಾಗಬೇಕಿತ್ತು ಆದರೆ, ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ಮುಂದೂಡಲಾಗಿತ್ತು. 

Stay up to date on all the latest ಬಾಲಿವುಡ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp