ನಟ ಅಮಿತಾಬ್‌ ಬಚ್ಚನ್‌ಗೆ ಮತ್ತೆ ಶಸ್ತ್ರಚಿಕಿತ್ಸೆ..!

ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ.

Published: 28th February 2021 11:48 AM  |   Last Updated: 28th February 2021 11:48 AM   |  A+A-


Amitabh Bachchan

ಅಮಿತಾಬ್ ಬಚ್ಚನ್

Posted By : Srinivasamurthy VN
Source : Online Desk

ಮುಂಬೈ: ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರು ಟ್ವೀಟ್ ಮಾಡಿದ್ದು, 'ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಯವಾಗಿದೆ...ಶಸ್ತ್ರಚಿಕಿತ್ಸೆ...ಬರೆಯಲು ಸಾಧ್ಯವಾಗುತ್ತಿಲ್ಲ...' ಎಂದು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ ಟ್ವಿಟರ್‌ನಲ್ಲಿ ಆಶ್ಚರ್ಯ ಸೂಚಕ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನಷ್ಟೇ ಹಾಕಿದ್ದಾರೆ.

78 ವರ್ಷದ ಅಮಿತಾಬ್ ಬಚ್ಚನ್ ಇತ್ತೀಚೆಗೆ ಕೋವಿಡ್‌ಗೆ ಬಹಳ ದಿನಗಳವರೆಗೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಪಡೆದು ಮತ್ತೆ ಚಿತ್ರೀಕರಣಗಳಲ್ಲಿ ಅಮಿತಾಬ್‌ ಭಾಗಿಯಾಗಿದ್ದರು.  ವಿಕಾಸ್‌ ಬಾಹ್ಲ್‌ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿ ಮಾಹಿತಿ ನೀಡಿದ್ದರು.

ಕಳೆದ ವರ್ಷ, ಬಿಗ್ ಬಿ ಮತ್ತು ಅವರ ಕುಟುಂಬದ ಇತರ ಮೂವರು ಸದಸ್ಯರಾದ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಬಿಗ್ ಬಿ ಅವರ 9 ವರ್ಷದ ಮೊಮ್ಮಗಳು ಜುಲೈನಲ್ಲಿ ತಾವು ಕೋವಿಡ್-19 ಸೋಂಕಿಗೆ ತುತ್ತಾಗಿರುವುದಾಗಿ ಹೇಳಿದ್ದರು.

ಇನ್ನು ಅಮಿತಾಬ್‌ ಅಭಿನಯದ ಚೆಹರೆ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ ಹಾಗೂ ಕ್ರೀಡಾ ಕಥೆಯನ್ನು ಆಧರಿಸಿದ 'ಝುಂಡ್‌' (Jhund) ಸಿನಿಮಾ ಜೂನ್‌ 18ರಂದು ತೆರೆ ಕಾಣಲು ಸಿದ್ಧತೆ ನಡೆಸಿದೆ.
 

Stay up to date on all the latest ಬಾಲಿವುಡ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp