ಬಾಲಿವುಡ್ ಡ್ರಗ್ಸ್ ಪ್ರಕರಣ: ಅರ್ಜುನ್ ರಾಂಪಾಲ್ ಸೋದರಿಗೆ ಎನ್‌ಸಿಬಿ ಸಮನ್ಸ್

ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟ ಅರ್ಜುನ್ ರಾಂಪಾಲ್ ಅವರ ಸಹೋದರಿಗೆ ಸಮನ್ಸ್ ನೀಡಿದೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

Published: 06th January 2021 11:04 AM  |   Last Updated: 06th January 2021 11:04 AM   |  A+A-


ಅರ್ಜುನ್ ರಾಂಪಾಲ್

Posted By : Raghavendra Adiga
Source : ANI

ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟ ಅರ್ಜುನ್ ರಾಂಪಾಲ್ ಅವರ ಸಹೋದರಿಗೆ ಸಮನ್ಸ್ ನೀಡಿದೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಅವರು ಇಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ತನಿಖಾ ಸಂಸ್ಥೆಗೆ ಹಾಜರಾಗಲಿದ್ದಾರೆ. ಬಾಲಿವುಡ್ ಡ್ರಗ್ಪ್ರಕರಣದ ಮಧ್ಯೆ ಎನ್‌ಸಿಬಿ ಅರ್ಜುನ್ ಮತ್ತು ಅವರ ಪ್ರೇಯಸಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಅವರನ್ನು ವಿಚಾರಣೆ ನಡೆಸಿದ ಕೆಲ ವಾರಗಳ ನಂತರ ಸಮನ್ಸ್ ಬಂದಿದೆ.

ಕಳೆದ ನವೆಂಬರ್ ನಲ್ಲಿ ಎನ್‌ಸಿಬಿ ಅಧಿಕಾರಿಗಳು ಅರ್ಜುನ್ ನಿವಾಸದ ಮೇಲೆ ದಾಳಿ ನಡೆಸಿ ಕೆಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದ್ದರು. ಗೇಬ್ರಿಯೆಲಾ ಅವರನ್ನು ಅದೇ ದಿನ ಆರು ಗಂಟೆಗಳ ಕಾಲ ಪ್ರಶ್ನಿಸಲಾಗಿತ್ತು. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಮತ್ತು ನನಗೂ ಡ್ರಗ್ಸ್ ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನಟ ಡಿಸೆಂಬರ್‌ನಲ್ಲಿ ತಿಳಿಸಿದ್ದರು.

ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಎನ್‌ಸಿಬಿ ಬಾಲಿವುಡ್‌ನಲ್ಲಿ ಮಾದಕ ದ್ರವ್ಯ ಸೇವನೆ ಕುರಿತು ತನಿಖೆ ಆರಂಭಿಸಿತ್ತು.ಈ ಪ್ರಕರಣದಲ್ಲಿ ಏಜೆನ್ಸಿ ಈವರೆಗೆ ಸುಮಾರು 25 ಜನರನ್ನು ಬಂಧಿಸಿದೆ.

Stay up to date on all the latest ಬಾಲಿವುಡ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp