'ಲೈಗರ್' ಮೂಲಕ ಕನ್ನಡ, ಹಿಂದಿ ಸೇರಿ ಪಂಚಭಾಷೆಗಳಿಗೆ ವಿಜಯ್ ದೇವರಕೊಂಡ ಪಾದಾರ್ಪಣೆ
ಯುವಕ-ಯುವತಿಯರ ಫೇವರಿಟ್ ನಟ, ವಿಜಯ್ ದೇವರಕೊಂಡ ಲೈಗರ್ ಚಿತ್ರದ ಮೂಲಕ ಪಂಚಭಾಷಾ ನಟ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಬಾಲಿವುಡ್ ಗೆ ಸಹ ಕಾಲಿಡುತ್ತಿದ್ದಾರೆ.
Published: 18th January 2021 10:58 AM | Last Updated: 18th January 2021 01:18 PM | A+A A-

ಲಿಗರ್ ಪೋಸ್ಟರ್
ಯುವಕ-ಯುವತಿಯರ ಫೇವರಿಟ್ ನಟ, ವಿಜಯ್ ದೇವರಕೊಂಡ ಲೈಗರ್ ಚಿತ್ರದ ಮೂಲಕ ಪಂಚಭಾಷಾ ನಟ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಬಾಲಿವುಡ್ ಗೆ ಸಹ ಕಾಲಿಡುತ್ತಿದ್ದಾರೆ.
ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಬಾಲಿವುಡ್ ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಂಸ್ಥೆ ಚಿತ್ರವನ್ನು ನಿರ್ಮಿಸಲಿದೆ. ಲೈಗರ್ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ.
ವಿಜಯ್ ದೇವರಕೊಂಡಗೆ ನಾಯಕಿಯಾಗಿ ಬಾಲಿವುಡ್ ನ ಅನನ್ಯ ಪಾಂಡೆ ಅಭಿನಯಿಸಲಿದ್ದಾರೆ. ಚಿತ್ರದ ಲುಕ್ ವೊಂದನ್ನು ಕರಣ್ ಜೋಹರ್ ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
Presenting LIGER, starring the ruler of big screens & hearts - Vijay Deverakonda & the fiery Ananya Panday. Directed by the exceptionally skilled Puri Jagannadh, we can't wait to let the world witness this story in 5 languages - Hindi, Telugu, Tamil, Kannada & Malayalam. #Liger pic.twitter.com/6hOBAB2wgJ
— Karan Johar (@karanjohar) January 18, 2021