
ಪೃಥ್ವಿ ಅಂಬರ್
ಬೆಂಗಳೂರು: ದಿಯಾ ಸಿನಿಮಾ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿದ್ದ ನಟ ಪೃಥ್ವಿ ಅಂಬರ್ ಈಗ ಬಾಲಿವುಡ್ ಪಾದಾರ್ಪಣೆಗೆ ಸಜ್ಜಾಗಿದ್ದಾರೆ.
ಹೌದು.. ದಿಯಾ ಸಿನಿಮಾದ ಆದಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವ ಪೃಥ್ವಿ ಸದ್ಯ ಸಾಲು ಸಾಲು ಕನ್ನಡದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಇದೀಗ ಇದೇ ಪೃಥ್ವಿ ಬಾಲಿವುಡ್ ಪ್ರವೇಶಕ್ಕೂ ಸಜ್ಜಾಗಿದ್ದಾರೆ. ತಮ್ಮದೇ ದಿಯಾ ಚಿತ್ರದ ಹಿಂದಿ ರಿಮೇಕ್ ನಲ್ಲಿ ಪೃಥ್ವಿ ನಟಿಸಲಿದ್ದು, ಹಿಂದಿ ರಿಮೇಕ್ ನಲ್ಲೂ ಪೃಥ್ವಿ ಆದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
#ShootDiaries Lucknow welcomes with Sharma Ji Ki Chai pic.twitter.com/NF6z75sTMJ
— Pruthvi Ambaar (@AmbarPruthvi) January 17, 2021
ಮೂಲಗಳ ಪ್ರಕಾರ ಈಗಾಗಲೇ ಹಿಂದಿ ಅವತರಣಿಕೆಯ ದಿಯಾ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ನಟ ಪೃಥ್ವಿ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿರುವ ಪೃಥ್ವಿ ಲಖನೌನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ.
#Sugarless #HappySankranti pic.twitter.com/t1IUw399Pl
— Pruthvi Ambaar (@AmbarPruthvi) January 15, 2021
A new version of #Dia is coming just for fans from Tollywood! @kushee_ravi @AJANEESHB @krishnac2727 #Neevena lyrical video https://t.co/mPqTYjFKoF
— Pruthvi Ambaar (@AmbarPruthvi) January 15, 2021
ಇನ್ನು ಹಿಂದಿಯಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ? ಮತ್ತೋರ್ವ ನಾಯಕ ಯಾರು ಎನ್ನುವ ಬಗ್ಗೆ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ. ದಿಯಾ ಹಿಂದಿ ರಿಮೇಕ್ ಚಿತ್ರೀಕರಣವನ್ನು ಡೆಹರಾಡೂನ್ ಮತ್ತು ಮಸ್ಸೂರಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
ಅಂದಹಾಗೆ ನಟ ಪೃಥ್ವಿ ಅಂಬರ್ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಲೈಫ್ ಈಸ್ ಬ್ಯೂಟಿಫುಲ್, ಶಿವಪ್ಪ, ಶುಗರ್ ಲೆಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಕೆಎಸ್ ಅಶೋಕ್ ನಿರ್ದೇಶನದ ದಿಯಾ ಸಿನಿಮಾದಲ್ಲಿ ಖುಷಿ ರವಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. 2020 ಪ್ರಾರಂಭದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಗೆ ಕನ್ನಡ ಚಿತ್ರಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ಒಟಿಟಿಯಲ್ಲಿ ರಿಲೀಸ್ ಆದಾಗಲು ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ.