'ತಾಂಡವ್' ವಿರುದ್ಧ ವಿವಾದಾತ್ಮಕ ಬರಹ: ನಟಿ ಕಂಗನಾ ರಾನಾವತ್ ಟ್ವಿಟ್ಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ
ತಮ್ಮ ಟ್ವಿಟ್ಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಟ್ವೀಟ್ ಮಾಡಿದ್ದಾರೆ. ತಾಂಡವ್ ಕ್ರಿಯೇಟರ್ಸ್ ವೆಬ್ ಸರಣಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ.
Published: 21st January 2021 12:21 PM | Last Updated: 21st January 2021 12:32 PM | A+A A-

ಕಂಗನಾ ರಾನಾವತ್
ಮುಂಬೈ: ತಮ್ಮ ಟ್ವಿಟ್ಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಟ್ವೀಟ್ ಮಾಡಿದ್ದಾರೆ. ತಾಂಡವ್ ಕ್ರಿಯೇಟರ್ಸ್ ವೆಬ್ ಸರಣಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ.
ಇದೀಗ ಡಿಲೀಟ್ ಮಾಡಿರುವ ಟ್ವೀಟ್ ನಲ್ಲಿ ಕಂಗನಾ ರಾನಾವತ್, ವೆಬ್ ಸರಣಿಯಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಲಾಗಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ, ಇದು ತಲೆ ಕತ್ತರಿಸುವ ಸಮಯ ಎಂದು ಕಠುವಾಗಿ ಬರೆದಿದ್ದರು.
ತಮ್ಮ ಖಾತೆಯ ಬಗ್ಗೆ ಟ್ವಿಟ್ಟರ್ ಸಂಸ್ಥೆಗೆ ವರದಿ ನೀಡಿದ ಲಿಬರಲ್ ಕಮ್ಯುನಿಟಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ ಕಂಗನಾ, ಟ್ವಿಟ್ಟರ್ ಸಿಇಒ ಜಾಕ್ ಡೊರ್ಸಿ ಅವರನ್ನು ಚಾಚಾ ಎಂದು ಕರೆದಿದ್ದಾರೆ. ನನ್ನ ಟ್ವಿಟ್ಟರ್ ಖಾತೆಗೆ ನಿರ್ಬಂಧ ಹೇರಿದರೂ ಕೂಡ ನನ್ನ ಚಿತ್ರಗಳ ಮೂಲಕ ದೇಶಭಕ್ತಿಯನ್ನು ತೋರಿಸುವ ನನ್ನ ಕೆಲಸ ಮುಂದುವರಿಯಲಿದೆ, ನಿಮ್ಮ ಜೀವನ ನರಕವಾಗುವ ರೀತಿಯಲ್ಲಿ ನಾನು ಮಾಡಬಲ್ಲೆ ಎಂದು ಕಟುವಾಗಿ ಕಂಗನಾ ಬರೆದುಕೊಂಡಿದ್ದಾರೆ.
ಕೋಮು ಸೌಹಾರ್ದತೆಯನ್ನು ಕೆರಳಿಸಿ ಹಿಂದೂ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುತ್ತಿದೆ ಎಂದು ಹಲವರು ತಾಂಡವ್ ವೆಬ್ ಸರಣಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಶಿವ ದೇವರಿಗೆ ದೃಶ್ಯವೊಂದರಲ್ಲಿ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.