ಆರ್ಥಿಕ ತಜ್ಞೆಯ ಸೌಂದರ್ಯ ಹೊಗಳಿದ ಬಿಗ್ ಬಿ; ಸೆಕ್ಸಿಸ್ಟ್ ಹೇಳಿಕೆ ಎಂದು ನೆಟ್ಟಿಗರು ಕಿಡಿ!

ಕೌನ್ ಬನೇಗಾ ಕರೋಡ್ ಪತಿ ಶೋ ದ 12ನೇ ಸೀಸನ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಆರ್ಥಿಕ ತಜ್ಞೆಯನ್ನು ಹೊಗಳಿ ಪೇಚಿಗೆ ಸಿಲುಕಿದ್ದಾರೆ.

Published: 22nd January 2021 07:06 PM  |   Last Updated: 22nd January 2021 07:08 PM   |  A+A-


Gita-amitabh

ಗೀತಾ-ಅಮಿತಾಬ್ ಬಚ್ಚನ್

Posted By : Vishwanath S
Source : Online Desk

ಮುಂಬೈ: ಕೌನ್ ಬನೇಗಾ ಕರೋಡ್ ಪತಿ ಶೋ ದ 12ನೇ ಸೀಸನ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಆರ್ಥಿಕ ತಜ್ಞೆಯನ್ನು ಹೊಗಳಿ ಪೇಚಿಗೆ ಸಿಲುಕಿದ್ದಾರೆ.
 
'ಅವರ ಮುಖವು ತುಂಬಾ ಸುಂದರವಾಗಿ, ಯಾರೂ ಸಹ ಆರ್ಥಿಕ ತಜ್ಞೆ ಎಂದು ಹೇಳಲು ಸಾಧ್ಯವಿಲ್ಲ' ಎಂದು ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರನ್ನು ಹೊಗಳಿದ್ದಾರೆ.

ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಅಮಿತಾಬ್ ಹೀಗೆ ಹೇಳುತ್ತಿರುವ ವಿಡಿಯೋವನ್ನು ಗೀತಾ ಗೋಪಿನಾಥ್ ಅವರು ಶೇರ್ ಮಾಡಿ, ಪ್ರತಿಕ್ರಿಯೆ ನೀಡಿದ್ದಾರೆ.

ಜನಪ್ರಿಯ ಕ್ವಿಜ್ ಕಾರ್ಯಕ್ರಮದಲ್ಲಿ ಅಮಿತಾಭ್, ಹಾಟ್ ಸೀಟಿನಲ್ಲಿ ಕುಳಿತ ಸ್ಪರ್ಧಿಗೆ, ಗೀತಾ ಗೋಪಿನಾಥ್ ಅವರ ಫೋಟೋ ತೋರಿಸಿ, ಈ ಚಿತ್ರದಲ್ಲಿ ಕಾಣುವ ಆರ್ಥಿಕ ತಜ್ಞರು 2019ರಿಂದ ಯಾವ ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞರಾಗಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ.

ಬಳಿಕ ಅವರ ಮುಖವೂ ತುಂಬಾ ಸುಂದರವಾಗಿದೆ, ಯಾರೂ ಅವರನ್ನು ಆರ್ಥಿಕತೆಗೆ ಸಂಬಂಧಿಸಿದವರು ಎನ್ನುವುದಿಲ್ಲ' ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಗೀತಾ ಶೇರ್ ಮಾಡಿ, ನಾನು ಸಾರ್ವಕಾಲಿನ ಶ್ರೇಷ್ಠ ನಟರಾದ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿ. ಈ ವಿಡಿಯೋ ತಮ್ಮ ಪಾಲಿಗೆ ಬಹಳ ವಿಶೇಷ. ಇದಕ್ಕಿಂತ ಮಿಗಿಲಾಗಿರುವುದು ತಮಗೆ ಸಿಗುತ್ತದೆ ಎಂದೆನಿಸದು ಎಂದು ಹೇಳಿದ್ದಾರೆ. 

ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅಮಿತಾಭ್ 'ಧನ್ಯವಾದಗಳು ಗೀತಾ ಅವರೆ. ನಾನು ನಿಮ್ಮ ಬಗ್ಗೆ ಬಳಸಿದ ಪ್ರತಿಯೊಂದು ಪದವೂ ವಿನಯದಿಂದ ಕೂಡಿತ್ತು' ಎಂದು ಹೇಳಿದ್ದಾರೆ.

Stay up to date on all the latest ಬಾಲಿವುಡ್ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp