ತಾಂಡವ್ ತಂಡಕ್ಕೆ ಸಂಕಷ್ಟ: ಸೈಫ್ ಅಲಿ ಖಾನ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್
ವೆಬ್ ಸರಣಿಯ ತಯಾರಕರು ಬೇಷರತ್ತಾಗಿ ಕ್ಷಮೆಯಾಚಿಸುತ್ತಿದ್ದರೂ, ಒಂಬತ್ತು ಸಂಚಿಕೆಗಳ ಸರಣಿಯ ವಿವಾದಾತ್ಮಕ ದೃಶ್ಯಗಳನ್ನು ಅಳಿಸಿ ಹಾಕಿದ್ದರೂ ಹಿಂದೂ ಸಂಘಟನೆಯ ಮುಖಂಡರೊಬ್ಬರು ನಟ ಸೈಫ್ ಅಲಿ ಖಾನ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
Published: 23rd January 2021 09:00 PM | Last Updated: 23rd January 2021 09:00 PM | A+A A-

ತಾಂಡವ್ ಚಿತ್ರದ ದೃಶ್ಯ
ಭೋಪಾಲ್: ವೆಬ್ ಸರಣಿಯ ತಯಾರಕರು ಬೇಷರತ್ತಾಗಿ ಕ್ಷಮೆಯಾಚಿಸುತ್ತಿದ್ದರೂ, ಒಂಬತ್ತು ಸಂಚಿಕೆಗಳ ಸರಣಿಯ ವಿವಾದಾತ್ಮಕ ದೃಶ್ಯಗಳನ್ನು ಅಳಿಸಿ ಹಾಕಿದ್ದರೂ ಹಿಂದೂ ಸಂಘಟನೆಯ ಮುಖಂಡರೊಬ್ಬರು ನಟ ಸೈಫ್ ಅಲಿ ಖಾನ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಮಧ್ಯಪ್ರದೇಶ ಹಿಂದೂ ಸಂಘಟನೆಯ ಮುಖಂಡರಿಂದ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಗುನಾ ಜಿಲ್ಲೆಯ ಗುಣ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಆರ್ಎಸ್ಎಸ್ ಅಂಗಸಂಸ್ಥೆ ಹಿಂದೂ ಜಾಗರನ್ ಮಂಚ್ನ ನಾಯಕ ಕೇಶವ್ ಶರ್ಮಾ ಅವರು ಹೊಸ ಎಫ್ಐಆರ್ ದಾಖಲಿಸಿದ್ದಾರೆ.
ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ ಮಧ್ಯ ಭಾರತದ ರಾಜ್ಯದಲ್ಲಿ ಮೂರು ದಿನಗಳಲ್ಲಿ ವಿವಾದಾತ್ಮಕ ವೆಬ್ ಸರಣಿಯ ಪಾತ್ರವರ್ಗ ಮತ್ತು ಸಿಬ್ಬಂದಿ ವಿರುದ್ಧ ದಾಖಲಾದ ಮೂರನೇ ಎಫ್ಐಆರ್ ಇದಾಗಿದೆ.
ಗುರುವಾರ ತಡರಾತ್ರಿ ನೋಂದಾಯಿಸಲಾದ ಎಫ್ಐಆರ್, ಐಪಿಸಿಯ 153-ಎ, 295, 505 (1) (ಬಿ), 505 (2) ಮತ್ತು 469 ಸೆಕ್ಷನ್ಗಳ ಅಡಿಯಲ್ಲಿ ಒಂಬತ್ತು ಜನರ ವಿರುದ್ಧ ದಾಖಲಾಗಿದೆ.
ವೆಬ್ ಸರಣಿಯ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ, ಕಥೆ ಬರಹಗಾರ ಗೌರವ್ ಸೋಲಂಕಿ, ನಟರಾದ ಮೊಹಮ್ಮದ್ ಅಯೂಬ್ ಮತ್ತು ಸೈಫ್ ಅಲಿ ಖಾನ್, ಕಾರ್ಯನಿರ್ವಾಹಕ ನಿರ್ಮಾಪಕ ಭೌಮಿಕ್ ಗೊಂಡಾಲಿಯಾ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ವಿಷಯ ಮುಖ್ಯಸ್ಥ ಅಪರ್ಣಾ ಪುರೋಹಿತ್ ಎಫ್ಐಆರ್ನಲ್ಲಿ ಹೆಸರಿಸಲ್ಪಟ್ಟಿದ್ದಾರೆ.