ವಿವಾದಾತ್ಮಕ ವೆಬ್ ಸರಣಿ 'ತಾಂಡವ್' ವಿರುದ್ಧ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಕರಣ ದಾಖಲು

ನಟ ಸೈಫ್ ಅಲಿ ಖಾನ್ ಅಭಿನಯದ ವಿವಾದಾತ್ಮಕ ವೆಬ್ ಸರಣಿ "ತಾಂಡವ್"  ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ ಎಂಬ ಆರೋಪದ ಹಿನ್ನೆಲೆ ಬೆಂಗಳೂರು ನಗರದ ಕೆ.ಆರ್. ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 

Published: 24th January 2021 07:15 PM  |   Last Updated: 24th January 2021 07:15 PM   |  A+A-


ತಾಂಡವ್

Posted By : Raghavendra Adiga
Source : PTI

ಬೆಂಗಳೂರು: ನಟ ಸೈಫ್ ಅಲಿ ಖಾನ್ ಅಭಿನಯದ ವಿವಾದಾತ್ಮಕ ವೆಬ್ ಸರಣಿ "ತಾಂಡವ್"  ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ ಎಂಬ ಆರೋಪದ ಹಿನ್ನೆಲೆ ಬೆಂಗಳೂರು ನಗರದ ಕೆ.ಆರ್. ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಿರಣ್ ಆರಾದ್ಯ ಅವರ ದೂರಿನ ಹಿನ್ನೆಲೆ "ತಾಂಡವ್" ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಫರಾನ್ ಅಖ್ತರ್, ನಟರಾದ  ಸೈಫ್ ಅಲಿ ಖಾನ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದ ಇಂಡಿಯಾ ಒರಿಜಿನಲ್ಸ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿತ್ತು.

ದೇವರನ್ನು ಅವಹೇಳನಕಾರಿಯಾಗಿ ನಿರೂಪಿಸಿ ಹಿಂದೂ ಭಾವನೆಗಳನ್ನು ಕೆರಳಿಸುವ ಕಥೆಯನ್ನು ವೆಬ್ ಸರಣಿ ಹೊಂದಿದೆ ಎಂದು ಕಿರಣ್ ತನ್ನ ದೂರಿನಲ್ಲಿ ಹೇಳಿದ್ದಾರೆ.  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ, 298, 153 ಮತ್ತು 34 ರ ಅಡಿಯಲ್ಲಿ ಪ್ರಕರಣದಾಖಲಾಗಿದೆ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ವೆಬ್ ಸರಣಿಯ ತಯಾರಕರು ಮತ್ತು ಪಾತ್ರವರ್ಗದ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಅಮೆಜಾನ್ ಪ್ರೈಮ್ ವಿಡಿಯೊದಲ್ಲಿನ ಒಂಬತ್ತು ಎಪಿಸೋಡ್ ನ ರಾಜಕೀಯ ಕಥಾನಕದಿಂದ ಕನಿಷ್ಠ ಎರಡು ದೃಶ್ಯಗಳನ್ನು ತೆಗೆಯಲಾಗಿದೆ. ಇದು ಹಿಂದೂ ದೇವತೆಗಳ ಅವಹೇಳನ ಮಾಡುವಂತಿದೆ ಎನ್ನುವ ಕುರಿತು ವ್ಯಾಪಕ ಟೀಕೆ, ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಈ ಬದಲಾವಣೆ ಮಾಡಲಾಗಿದೆ.

"ತಾಂಡವ್" ಪಾತ್ರವರ್ಗ ಮತ್ತು ಸಿಬ್ಬಂದಿ ಇದಾಗಲೇ ಕ್ಷಮೆಯಾಚಿಸಿದ್ದಾರೆ ಮತ್ತು ತಪ್ಪನ್ನು ಸರಿಪಡಿಸಲು ಕಥೆಯಲ್ಲಿ ಬದಲಾವಣೆ ತರಲು ಅವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Stay up to date on all the latest ಬಾಲಿವುಡ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp