ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ವರುಣ್ ಧವನ್, ನತಾಶಾ ದಲಾಲ್! 

ಖ್ಯಾತ ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ನ ಖ್ಯಾತನಾಮರು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

Published: 24th January 2021 11:35 PM  |   Last Updated: 24th January 2021 11:41 PM   |  A+A-


Varun Dhawan-Natasha Dalal

ವರುಣ್ ಧವನ್-ನತಾಶಾ ದಲಾಲ್

Posted By : Srinivasamurthy VN
Source : The New Indian Express

ಮುಂಬೈ: ಖ್ಯಾತ ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ನ ಖ್ಯಾತನಾಮರು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಇಂದು ಅಲಿಬಾಗ್‌ನ ಐಷಾರಾಮಿ 'ದಿ ಮಾನ್ಶನ್‌' ಹೋಟೆಲ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಹಿಂದೂ ಸಂಪ್ರದಾಯದಂತೆ ವರುಣ್, ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಸಂಜೆ 6.30ರಿಂದ ಮದುವೆ ಕಾರ್ಯ ಆರಂಭವಾಗಿದೆ. ಹೋಟೆಲ್ ಒಳಗಡೆ ಮದುವೆ ನಡೆಯುವ ಸ್ಥಳದಲ್ಲಿ ಆಮಂತ್ರಣ ನೀಡಿದವರ ಹೊರತಾಗಿ ಯಾರಿಗೂ ಒಳ ಪ್ರವೇಶಕ್ಕೆ ಅನುಮತಿಯಿಲ್ಲ. ಕೊರೋನಾ ಸಾಂಕ್ರಾಮಿಕದಿಂದಾಗಿ 40-50 ಆಮಂತ್ರಿತ ಗಣ್ಯರ ನಡುವೆ ಮದುವೆ ನಡೆದಿದೆ. 

ಮುಂಬರುವ ಫೆಬ್ರವರಿಯಲ್ಲಿ ಬಾಲಿವುಡ್ ಗಣ್ಯರಿಗಾಗಿ ವರುಣ್ ಅವರು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. 

ಶಾಲೆಯಲ್ಲಿದ್ದಾಗಲೇ ಪ್ರೀತಿಸುತ್ತಿದ್ದ ಜೋಡಿ
ವರುಣ್ ಮತ್ತು ನತಾಶಾ ದಲಾಲ್ ಜೋಡಿ ಶಾಲೆಯಲ್ಲಿದ್ದಾಗಲೇ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ವರುಣ್ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಪ್ರೀತಿ ವಿಚಾರವನ್ನು ಈ ಜೋಡಿ ಮುಚ್ಚಿಟ್ಟಿತ್ತು. ತದನಂತರದಲ್ಲಿ ಸಾರ್ವಜನಿಕವಾಗಿ ವರುಣ್ ಹಾಗೂ ನತಾಶಾ ತಿರುಗಾಡುತ್ತ, ಕ್ಯಾಮರಾ ಮುಂದೆ ಪೋಸ್ ನೀಡುತ್ತಿದ್ದರು. ಮೊದಲಿಗೆ ವರುಣ್ ಮೂರು ಬಾರಿ ಪ್ರೇಮ ನಿವೇದನೆ ಮಾಡಿದರೂ ಕೂಡ ನತಾಶಾ ಒಪ್ಪಿರಲಿಲ್ಲವಂತೆ. ತದನಂತರದಲ್ಲಿ ಅವರು ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.  ವಾರದ ಹಿಂದಷ್ಟೇ ವರುಣ್ ಹಾಗೂ ನತಾಶಾ ಮದುವೆ ವಿಚಾರ ಬಹಿರಂಗವಾಗಿತ್ತು. 
 

Stay up to date on all the latest ಬಾಲಿವುಡ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp