ಬಾಲಿವುಡ್ ನ ನೃತ್ಯ ಸಂಯೋಜಕಿ ಸರೋಜ್ ಖಾನ್ ಜೀವನ ಚರಿತ್ರೆ ತೆರೆಗೆ 

ಬಾಲಿವುಡ್ ನ ನೃತ್ಯ ಸಂಯೋಜನೆಯ ದಂತಕಥೆ ಸರೋಜ್ ಖಾನ್ ಅವರ ಜೀವನ ಚರಿತ್ರೆಯಾಧಾರಿತ ಚಿತ್ರ ತಯಾರಾಗುತ್ತಿದೆ.
ಸರೋಜ್ ಖಾನ್ (ಸಂಗ್ರಹ ಚಿತ್ರ)
ಸರೋಜ್ ಖಾನ್ (ಸಂಗ್ರಹ ಚಿತ್ರ)

ಮುಂಬೈ: ಬಾಲಿವುಡ್ ನ ನೃತ್ಯ ಸಂಯೋಜನೆಯ ದಂತಕಥೆ ಸರೋಜ್ ಖಾನ್ ಅವರ ಜೀವನ ಚರಿತ್ರೆಯಾಧಾರಿತ ಚಿತ್ರ ತಯಾರಾಗುತ್ತಿದೆ.

ನಿರ್ಮಲಾ ಕಿಶನ್ಚಂದ್ ಸಾಧು ಸಿಂಗ್ ನಾಗ್ಪಾಲ್ ಎಂಬ ಬಾಲ್ಯದ ಹೆಸರನ್ನು ಹೊತ್ತಿದ್ದ ಸರೋಜ್ ಖಾನ್ ಬಾಲಿವುಡ್ ಚಿತ್ರಜಗತ್ತಿಗೆ ಪಾದಾರ್ಪಣೆ ಮಾಡಿದ ನಂತರ ಅವರ ಹೆಸರನ್ನು ಬದಲಿಸಿಕೊಂಡಿದ್ದರು.  ಅವರು ಮೂರು ವರ್ಷದವರಾಗಿದ್ದಾಗ ಚಿತ್ರಜಗತ್ತನ್ನು ಪ್ರವೇಶಿಸಿದ್ದರು.

10-12ನೇ ವಯಸ್ಸಿನಲ್ಲಿಯೇ ಸರೋಜ್ ಖಾನ್ ಸಹಾಯಕಿ ನೃತ್ಯ ಸಂಯೋಜಕಿಯಾಗಿ ಬಾಲಿವುಡ್ ಜಗತ್ತನ್ನು ಪ್ರವೇಶಿಸಿದ್ದರು. ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಚೋಲಿ ಕೆ ಪೀಚೆ ಕ್ಯಾ ಹೈ ',' ಹವಾ ಹವಾಯಿ  ಧಕ್ ಧಕ್ ಕರ್ನೆ ಲಗಾ, ದೇವದಾಸ್, ಲ್ಯಾಮ್ಹೆ, ನಾಗಿನಾ, ಕಳಂಕ್, ಚಾಂದಿನಿ, ಸಾವರಿಯಾ, ತಾಲ್, ಬೀಟಾ, ಹಮ್ ದಿಲ್ ದೆ ಚುಕೆ ಸನಮ್ ಮೊದಲಾದ ಹಾಡುಗಳು ಜನಪ್ರಿಯ, ಆ ಹಾಡುಗಳನ್ನು ಮೆಚ್ಚದವರು ಬಹುಶಃ ಯಾರೂ ಇರಲಿಕ್ಕಿಲ್ಲ.

ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದ ಸರೋಜ್ ಖಾನ್ ಅವರು ಮಾಧುರಿ ದೀಕ್ಷಿತ್ ಮತ್ತು ಶ್ರೀದೇವಿ ಅವರಿಗೆ ಮಾಡಿದ್ದ ನೃತ್ಯ ಸಂಯೋಜನೆ ಬಹಳ ಜನಪ್ರಿಯ. ನಿರ್ಮಾಪಕ ಭೂಷಣ್ ಕುಮಾರ್ ಅವರು ಸರೋಜ್ ಖಾನ್ ಮಕ್ಕಳಾದ ರಾಜು ಖಾನ್, ಸುಕೈನಾ ಖಾನ್ ಮತ್ತು ಹಿನಾ ಖಾನ್ ರಿಂದ ಜೀವನ ಚರಿತ್ರೆ ನಿರ್ಮಿಸಲು ಹಕ್ಕು ಪಡೆದುಕೊಂಡಿದ್ದಾರೆ.

 ಸರೋಜ್ ಖಾನ್ ಅವರು ತಮ್ಮ ನೃತ್ಯಗಳಿಂದ ಮತ್ತು ಸಂಯೋಜನೆಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು, ಹಿಂದಿ ಚಿತ್ರರಂಗದಲ್ಲಿ ನೃತ್ಯ ಸಂಯೋಜನೆಯಲ್ಲಿ ಕ್ರಾಂತಿಯುಂಟುಮಾಡಿದರು. ಅವರ ನೃತ್ಯ ಪ್ರಕಾರಗಳು ಪ್ರತಿಯೊಬ್ಬ ಚಲನಚಿತ್ರ ನಿರ್ಮಾಪಕರಿಗೆ ಸಹಾಯ ಮಾಡುವ ಕಥೆಗಳನ್ನು ಹೇಳುತ್ತವೆ ಎಂದು ನಿರ್ಮಾಪಕರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com