ಹಿರಿಯ ನಟ ನಾಸಿರುದ್ದೀನ್ ಶಾ ಆಸ್ಪತ್ರೆಯಿಂದ ಬಿಡುಗಡೆ

ನ್ಯೂಮೋನಿಯಾದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ನಾಸಿರುದ್ದೀನ್ ಶಾ ಬುಧವಾರ ಬೆಳಗ್ಗೆ ಡಿಸ್ಚಾರ್ಜ್ ಆಗಿರುವುದಾಗಿ ಅವರ ಪುತ್ರ, ನಟ ವಿವಾನ್ ಶಾ ಹೇಳಿದ್ದಾರೆ.
ನಾಸಿರುದ್ದೀನ್ ಶಾ
ನಾಸಿರುದ್ದೀನ್ ಶಾ

ಮುಂಬೈ: ನ್ಯೂಮೋನಿಯಾದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ನಾಸಿರುದ್ದೀನ್ ಶಾ ಬುಧವಾರ ಬೆಳಗ್ಗೆ ಡಿಸ್ಚಾರ್ಜ್ ಆಗಿರುವುದಾಗಿ ಅವರ ಪುತ್ರ, ನಟ ವಿವಾನ್ ಶಾ ಹೇಳಿದ್ದಾರೆ. ಕಳೆದ ಮಂಗಳವಾರ ಪಿ ಡಿ ಹಿಂದುಜಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದ 70 ವರ್ಷದ ಹಿರಿಯ ನಟ ಮನೆಗೆ ವಾಪಸ್ಸಾಗಿದ್ದಾರೆ. 

'ಬ್ಯಾಕ್ ಹೋಮ್' ಅಡಿಬರಹವಿರುವ ತಮ್ಮ ತಂದೆ ಹಾಗೂ ತಾಯಿಯ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ನಟ ರತ್ನ ಪಠಾಕ್ ಶಾ ಹೇಳಿಕೊಂಡಿದ್ದಾರೆ. ಇಂದು ಬೆಳಗ್ಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಗಿ ಅವರು ಬರೆದುಕೊಂಡಿದ್ದಾರೆ. ನಾಸಿರುದ್ದೀನ್ ಶಾ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಜುಲೈ 3ರಂದು ಆಸ್ಪತ್ರೆ ಮೂಲಗಳು ಹೇಳಿದ್ದವು.

46 ವರ್ಷಗಳ ವೃತ್ತಿಜೀವನದಲ್ಲಿ ನಾಸಿರುದ್ದೀನ್ ಶಾ, ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಅಸಾಧಾರಣ ಕೊಡುಗೆ ನೀಡಿದ್ದು, ಅನೇಕ ರಾಷ್ಟ್ರೀಯ ಪ್ರಶಸ್ತಿಗಳ ವಿಜೇತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com