ಟಿ-ಸೀರೀಸ್ ಅಧ್ಯಕ್ಷ ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರ ಆರೋಪ: ಎಫ್‌ಐಆರ್ ದಾಖಲು

ಮ್ಯೂಸಿಕ್ ದಿಗ್ಗಜ ಟಿ-ಸೀರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ದಿವಂಗತ ಗುಲ್ಶನ್ ಕುಮಾರ್ ಅವರ ಪುತ್ರ, ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣದಡಿ ಎಫ್ ಐಆರ್ ದಾಖಲಾಗಿದೆ.
ಭೂಷಣ್ ಕುಮಾರ್
ಭೂಷಣ್ ಕುಮಾರ್

ಮುಂಬೈ: ಮ್ಯೂಸಿಕ್ ದಿಗ್ಗಜ ಟಿ-ಸೀರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ದಿವಂಗತ ಗುಲ್ಶನ್ ಕುಮಾರ್ ಅವರ ಪುತ್ರ, ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣದಡಿ ಎಫ್ ಐಆರ್ ದಾಖಲಾಗಿದೆ. ಮಹಿಳೆಯೊಬ್ಬರಿಗೆ ಉದ್ಯೋಗ ನೀಡುವ ಭರವಸೆ ಕೊಟ್ಟು ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಗಿರುವುದಾಗಿ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅಂಧೇರಿ (ವೆಸ್ಟ್)ಡಿ ಎನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅಪರಾಧ ನಡೆದ ಬಗ್ಗೆ ಪೋಲೀಸರು ಹೆಚ್ಚಿನ ವಿವರ ನೀಡಿಲ್ಲ.

"ದೂರಿನ ಪ್ರಕಾರ, ಭೂಷಣ್ ಕುಮಾರ್ ತನ್ನ ಸ್ವಂತ ಕಂಪನಿಯ ಕೆಲವು ಯೋಜನೆಗಳಲ್ಲಿ ಉದ್ಯೋಗವನ್ನು ಒದಗಿಸುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ಅವರಿಂದ ವಂಚನೆಗೆ ಒಳಗಾಗಿದ್ದಾಳೆ ಹಾಗಾಗಿ ಪೊಲೀಸರನ್ನು ಸಂಪರ್ಕಿಸಿದಳು" ಎಂದು ಅವರು ಹೇಳಿದರು.

ಐಪಿಸಿ ಸೆಕ್ಷನ್ 376 (ಅತ್ಯಾಚಾರ), 420 (ಮೋಸ), 506 (ಕ್ರಿಮಿನಲ್ ಬೆದರಿಕೆ) ವಿಭಾಗದಡಿ ಭೂಷಣ್ ಅವರ ವಿರುದ್ಧ ಕೇಸ್ ದಾಖಲಾಗಿದೆ. ಟಿ-ಸೀರೀಸ್ ಒಂದು ಮ್ಯೂಸಿಕ್ ರೆಕಾರ್ಡ್ ಬ್ರ್ಯಾಂಡ್ ಆಗಿದ್ದು ಗುಲ್ಶನ್ ಕುಮಾರ್ ಸ್ಥಾಪಿಸಿದ ಚಲನಚಿತ್ರ ನಿರ್ಮಾಣ ಸಂಸ್ಥೆ, ಇವರನ್ನು 'ಕ್ಯಾಸೆಟ್ ಕಿಂಗ್' ಎಂದೂ ಹೇಳಲಾಗಿದೆ. ಅವರು 1997 ರಲ್ಲಿ ಅಂಧೇರಿಯಲ್ಲಿ ಗುಂಡೇಟಿನಿಂದ ಹತ್ಯೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com