ತಾಂಡವ್ ವಿವಾದ: ಹಿಂದೂಗಳ ಬೇಷರತ್ ಕ್ಷಮೆಯಾಚಿಸಿದ ಅಮೆಜಾನ್

ತೀವ್ರ ವಿವಾದಕ್ಕೆ ಗುರಿಯಾಗಿದ್ದ ತಾಂಡವ್ ವೆಬ್ ಸೀರಿಸ್ ಕುರಿತಂತೆ ಅಮೆಜಾನ್ ಪ್ರೈಂ ಕೊನೆಗೂ ಹಿಂದೂಗಳ ಬೇಷರತ್ ಕ್ಷಮೆಯಾಚಿಸಿದೆ.

Published: 03rd March 2021 08:28 PM  |   Last Updated: 03rd March 2021 08:28 PM   |  A+A-


tandav-1

ತಾಂಡವ್ ಚಿತ್ರದ ಸ್ಟಿಲ್

Posted By : Vishwanath S
Source : Online Desk

ಮುಂಬೈ: ತೀವ್ರ ವಿವಾದಕ್ಕೆ ಗುರಿಯಾಗಿದ್ದ ತಾಂಡವ್ ವೆಬ್ ಸೀರಿಸ್ ಕುರಿತಂತೆ ಅಮೆಜಾನ್ ಪ್ರೈಂ ಕೊನೆಗೂ ಹಿಂದೂಗಳ ಬೇಷರತ್ ಕ್ಷಮೆಯಾಚಿಸಿದೆ. 

ವೆಬ್ ಸಿರೀಸ್ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆಜಾನ್ ಪ್ರೈಂ ಇಂಡಿಯಾ ಹಿಂದೂಗಳ ಭಾವನೆಯನ್ನು ಗಾಸಿಗೊಳಿಸಿದ್ದಕ್ಕೆ ಭೇಷರತ್ ಕ್ಷಮೆ ಕೇಳಿದೆ. 

ಪ್ರಕರಣ ಸಂಬಂಧಿಸಿದಂತೆ ಅಮೆಜಾನ್ ಪ್ರೈಂ ಇಂಡಿಯಾ ವಿಭಾಗದ ಕಂಟೆಂಟ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಭೇಷರತ್ ಕ್ಷಮೆಯಾಚಿಸಿ ಪ್ರಕಟಣೆ ಹೊರಡಿಸಿದೆ. 

ತಾಂಡವ್ ವೆಬ್ ಸೀರಿಸ್ ವಿವಾದ ಸಂಬಂಧ ಚಿತ್ರತಂಡದ ವಿರುದ್ಧ ದೇಶದ ವಿವಿದೆಡೆ 14 ಎಫ್ಐಆರ್ ದಾಖಲಾಗಿದ್ದವು. 

ತಾಂಡವ್ ವೆಬ್ ಸೀರಿಸ್ ನಲ್ಲಿ ನಟ ಸೈಫ್ ಅಲಿ ಖಾನ್, ಟ್ವಿಂಕಲ್ ಖನ್ನಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ. 

Stay up to date on all the latest ಬಾಲಿವುಡ್ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp