ಹೊಸ ಉದ್ಯಮಕ್ಕೆ ಕೈ ಹಾಕಿದ ಪ್ರಿಯಾಂಕಾ ಚೋಪ್ರಾ!

ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮಿಸ್ ವರ್ಲ್ಡ್ ನಿಂದ ಹಾಲಿವುಡ್ ವರೆಗೆ ಪಯಣಿಸಿ ಹೆಸರು ಗಳಿಸಿದ್ದು ಗೊತ್ತೇ ಇದೆ. ಅಮೆರಿಕದ ಪಾಪ್ ಗಾಯಕ ನಿಕ್ ಜೊನಸ್ ರನ್ನು ವಿವಾಹವಾದರು.

Published: 07th March 2021 02:14 PM  |   Last Updated: 08th March 2021 03:36 PM   |  A+A-


An intimate pooja by Priyanka Chopra and Nick Jonas

ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೊನಸ್ ಪೂಜೆಯಲ್ಲಿ ಭಾಗಿ

Posted By : Sumana Upadhyaya
Source : Online Desk

ನ್ಯೂಯಾರ್ಕ್: ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮಿಸ್ ವರ್ಲ್ಡ್ ನಿಂದ ಹಾಲಿವುಡ್ ವರೆಗೆ ಪಯಣಿಸಿ ಹೆಸರು ಗಳಿಸಿದ್ದು ಗೊತ್ತೇ ಇದೆ. ಅಮೆರಿಕದ ಪಾಪ್ ಗಾಯಕ ನಿಕ್ ಜೊನಸ್ ರನ್ನು ವಿವಾಹವಾದರು.

ಈಗಲೂ ಸಿನೆಮಾ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಈ ಮಧ್ಯೆ ಚಿತ್ರ ನಿರ್ಮಾಣ ಮಾಡಿದರು, ಹೇರ್ ಕೇರ್ ಉತ್ಪನ್ನದ ಅನಾಮಲಿ ಎಂಬ ಕಂಪೆನಿ ಆರಂಭಿಸಿದರು. ತಮ್ಮ ಜೀವನಚರಿತ್ರೆಯ ಪುಸ್ತಕವನ್ನು ಬರೆದು ಇತ್ತೀಚೆಗೆ ಹೆಸರು ಮಾಡಿದ್ದಾರೆ. ಇದೀಗ ಹೊಸ ಉದ್ಯಮಕ್ಕೆ ಕಾಲಿಟ್ಟಿರುವ ಪ್ರಿಯಾಂಕಾ ಚೋಪ್ರಾ ಹೊಸ ರೆಸ್ಟೋರೆಂಟ್ ನ್ನು ತೆರೆದಿದ್ದಾರೆ.

ಅದು ಇರುವುದು ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ. ಸೋನಾ ಎಂದು ರೆಸ್ಟೋರೆಂಟ್ ನ ಹೆಸರು. ಅಲ್ಲಿನ ವಿಶೇಷತೆ ಎಂದರೆ ಭಾರತೀಯ ಆಹಾರಗಳನ್ನು ಗ್ರಾಹಕರಿಗೆ ಉಣಬಡಿಸುವ ರೆಸ್ಟೋರೆಂಟ್ ಅದು. ಭಾರತೀಯರಾಗಿ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ಭಾರತೀಯ ಆಹಾರಗಳನ್ನು ಜನತೆಗೆ ನೀಡಲು ಖುಷಿಯಾಗಿದ್ದಾರೆ.

ಭಾರತೀಯ ಮೂಲದ ಚೆಫ್ ಹರಿನಾಯಕ್ ಎಂಬುವವರು ರೆಸ್ಟೋರೆಂಟ್ ನ ಮುಖ್ಯ ಬಾಣಸಿಗ. ಈ ತಿಂಗಳಾಂತ್ಯಕ್ಕೆ ಆರಂಭವಾಗಲಿರುವ ಸೋನಾ ರೆಸ್ಟೋರೆಂಟ್ ಪ್ರಾರಂಭಕ್ಕೆ ಇಬ್ಬರು ಸ್ನೇಹಿತರು ಮಾಡಿರುವ ಸಹಾಯವನ್ನು ಮರೆತಿಲ್ಲ ಪ್ರಿಯಾಂಕಾ ಚೋಪ್ರಾ. ಹೊಟೇಲ್ ವಿನ್ಯಾಸ ಆರಂಭದ ಕೆಲಸ ಪ್ರಾರಂಭವಾದ 2019ರಲ್ಲಿ ತಮ್ಮ ಪತಿ ಜೊತೆ ನಡೆಸಿದ್ದ ಪೂಜೆಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಚೋಪ್ರಾ ಅಪ್ ಲೋಡ್ ಮಾಡಿದ್ದಾರೆ.

Stay up to date on all the latest ಬಾಲಿವುಡ್ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp