ಟ್ವಿಟ್ಟರ್ ನಲ್ಲಿ ವೆಂಟಿಲೇಟರ್ ಗೆ ಬೇಡಿಕೆ ಇಟ್ಟ 3 ಗಂಟೆಗಳಲ್ಲೇ ಬಾಲಿವುಡ್ ನಟಿ ಪಿಯಾ ಸೋದರ ಕೊರೋನಾಗೆ ಬಲಿ!

ಬಾಲಿವುಡ್ ನಟಿ ಪಿಯಾ ಬಾಜಪೇಯಿ ಕೊರೋನಾ ಕಾರಣದಿಂದಾಗಿ ಮಂಗಳವಾರ ತನ್ನ ಸಹೋದರನನ್ನು ಕಳೆದುಕೊಂಡಿದ್ದಾರೆ.

Published: 04th May 2021 04:31 PM  |   Last Updated: 04th May 2021 05:03 PM   |  A+A-


ಪಿಯಾ ಬಾಜಪೇಯಿ

Posted By : Raghavendra Adiga
Source : Online Desk

ಬಾಲಿವುಡ್ ನಟಿ ಪಿಯಾ ಬಾಜಪೇಯಿ ಕೊರೋನಾ ಕಾರಣದಿಂದಾಗಿ ಮಂಗಳವಾರ ತನ್ನ ಸಹೋದರನನ್ನು ಕಳೆದುಕೊಂಡಿದ್ದಾರೆ. ಪಿಯಾ ತನ್ನ ಸೋದರನಿಗಾಗಿ ಟ್ವಿಟ್ತರ್ ನಲ್ಲಿ ವೆಂಟಿಲೇಟರ್ ಸಹಾಯಕ್ಕಾಗಿ ಕೇಳಿದ್ದ ಕೇವಲ ಮೂರು ಗಂಟೆಗಳಲ್ಲಿ ಈ ದುರಂತ ಸಂಭವಿಸಿದೆ. “ನನ್ನ ಸಹೋದರ ಇನ್ನಿಲ್ಲ…” ಎಂದು ಪಿಯಾ ಟ್ವೀಟ್ ಮಾಡಿದ್ದಾರೆ

ಉತ್ತರಪ್ರದೇಶದ ಫರೂಖಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿಯಾ ಬಾಜಪೇಯಿ ಸೋದರನಿಗೆ ನೆರವು ಕೋರಿ ನಟಿ ಸರಣಿ ಟ್ವೀಟ್ ಮಾಡಿದ್ದರು. ನಟಿಯ ಸೋದರನ ನಿಧನದ ಕೇವಲ ಮೂರು ಗಂಟೆಗಳ ಮುನ್ನ ಫರೂಖಾಬಾದ್ ಜಿಲ್ಲೆಯ, ಕಾಯಮ್‌ಗಂಜ್ ಬ್ಲಾಕ್‌ನಲ್ಲಿರುವ ನನಗೆ ತುರ್ತು ಸಹಾಯ ಬೇಕು, ಒಂದು ಬೆಡ್ ವೆಂಟಿಲೇಟರ್.. ತಕ್ಷಣ ಅಗತ್ಯವಿದೆ. ನನ್ನ ಸೋದರ ಸಾವಿನ ಬಾಗಿಲು ತಟ್ಟುತ್ತಿದ್ದಾನೆ. ಯಾರಾದರೂ ನೆರವಾಗಿ, ನೆರವಿಗಾಗಿ ಸಿದ್ದವಿದ್ದವರು ನಿಮಗೆ ಗೊತ್ತಿದ್ದರೆ ಸಂಪರ್ಕಿಸಿ ಎಂದು ಅವರ ಫೋನ್ ನಂಬರ್ ಸಹ ಹಾಕಿದ್ದರು.

ಪಿಯಾ ಬಿಜೆಪಿ ನಾಯಕ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನೂ ಸಂಪರ್ಕಿಸಿದ್ದರು, ಅವರು ಕೂಡ ಪಿಯಾಗೆ ಕರೆ ಮಾಡಿದ್ದಾರೆ.. ಬಾಲಿವುಡ್ ಖ್ಯಾತನಾಮರಾದ ಚಲನಚಿತ್ರ ನಿರ್ಮಾಪಕ ಒನಿರ್ ಮತ್ತು ನಟ ರೋಹಿತ್ ಭಟ್ನಾಗರ್ ಕೂಡ ಪಿಯಾರನ್ನು ಸಂಪರ್ಕಿಸಿದ್ದಾರೆ. ಅಂತಹ ಕಷ್ಟದ ಸಮಯದಲ್ಲಿ ತನ್ನ ಅಭಿಮಾನಿಗಳನ್ನು ಧೈರ್ಯವಾಗಿರಲು ಹೇಳಿದ್ದ ಪಿಯಾ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಆಶ್ ಅಲ್ವೆಸ್ ಅವರ ಪ್ರೇರಕ ನೋಟ್ ಒಂದನ್ನು ಪೋಸ್ಟ್ ಮಾಡಿದ್ದರು.

ಆದರೆ ಮೇಲಿನ ಯಾವುದೂ ನಡೆದರೂ ನಟಿಯ ಸೋದರ ಮಾತ್ರ ಬದುಕಿ ಬರಲಿಲ್ಲ ಎನ್ನುವುದು ಖೇದದ ಸಂಗತಿಯಾಗಿದೆ.

 

 
 
 
 
 
 
 
 
 
 
 
 
 
 
 

A post shared by Pia Bajpiee (@piabajpai)

 

Stay up to date on all the latest ಬಾಲಿವುಡ್ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp