'ಕೌನ್ ಬನೇಗಾ ಕರೋಡ್ ಪತಿ' 13ನೇ ಆವೃತ್ತಿ ನಡೆಸಿಕೊಡಲು ಬಿಗ್ ಬಿ ಅಮಿತಾಬ್ ಬಚ್ಚನ್ ತಯಾರು!

ಬಿಗ್ ಬಿ ಅಮಿತಾಬ್ ಬಚ್ಚನ್ ಇದೀಗ ತಾವು ಜನಪ್ರಿಯ ಗೇಮ್ ಶೋ 'ಕೌನ್ ಬನೇಗಾ ಕರೋಡ್ ಪತಿ' ಹದಿಮೂರನೇ ಸೀಸನ್ ನಡೆಸಿಕೊಡಲು ತಯಾರಾಗಿದ್ದಾರೆ.

Published: 07th May 2021 03:49 PM  |   Last Updated: 07th May 2021 04:47 PM   |  A+A-


ಅಮಿತಾಬ್ ಬಚ್ಚನ್

Posted By : Raghavendra Adiga
Source : ANI

ಬಿಗ್ ಬಿ ಅಮಿತಾಬ್ ಬಚ್ಚನ್ ಇದೀಗ ತಾವು ಜನಪ್ರಿಯ ಗೇಮ್ ಶೋ 'ಕೌನ್ ಬನೇಗಾ ಕರೋಡ್ ಪತಿ' ಹದಿಮೂರನೇ ಸೀಸನ್ ನಡೆಸಿಕೊಡಲು ತಯಾರಾಗಿದ್ದಾರೆ. ಕಾರ್ಯಕ್ರಮದ ನಿರ್ಮಾಣ ಸಂಸ್ಥೆ ಸೋನಿ ಟಿವಿ ಎಂಟರ್‌ಟೈನ್‌ಮೆಂಟ್ ಗುರುವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕಾರ್ಯಕ್ರಮದ ಟೀಸರ್ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದೆ.

ಹಾಟ್ ಸೀಟಿನಲ್ಲಿಅಮಿತಾಬ್ ಎದುರು ಕುಳಿತುಕೊಳ್ಳುವ ಸ್ಪರ್ಧಿಯನ್ನು ಬಿಗ್ ಬಿ ಗಮನಿಸುವುದರೊಂದಿಗೆ ಕ್ಲಿಪ್ ತೆರೆದುಕೊಳ್ಳುತ್ತದೆ. ಕಾರ್ಯಕ್ರಮದ ನೋಂದಣಿಗಮೇ 10 ರಿಂದ ಪ್ರಾರಂಭವಾಗುತ್ತವೆ ಎಂದು ಘೋಷಿಸಲಾಗಿದೆ.

ಬ್ರಿಟಿಷ್ ಕಾರ್ಯಕ್ರಮ 'ಹೂ ವಾಂಟ್ಸ್ ಟು ಬಿ ಮಿಲಿಯನೇರ್?' ಭಾರತೀಯ ರೂಪವಾದ 'ಕೌನ್ ಬನೇಗಾ ಕರೋಡ್ ಪತಿ' ಅನ್ನು ದೇಶಾದ್ಯಂತದ ಅಮಿತಾಬ್ ಅಭಿಮಾನಿಗಳು ಪ್ರೀತಿಸುತ್ತಾರೆ. ಶೋ  ನ ಮೊದಲ ಸೀಸನ್ 2000 ನೇ ಇಸವಿಯಲ್ಲಿ ಪ್ರಾರಂಭವಾಯಿತು ಮತ್ತು ಅಂದಿನಿಂದ, 12 ನೇ ಸೀಸನ್ ವರೆಗೆ ಯಶಸ್ವಿಯಾಗಿ ಮುಗಿದಿದ್ದು 13 ನೇ ಆವೃತ್ತಿಯು ಪ್ರಸ್ತುತ ಪ್ರೊಡಕ್ಷನ್ ಹಂತದಲ್ಲಿದೆ. ಜುಲೈ 2020 ರಲ್ಲಿ ಕೆಬಿಸಿಯ 12 ನೇ ಸೀಸನ್ ಚಿತ್ರೀಕರಿಸುವಾಗ, ನಟ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಇಬ್ಬರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಅದಾಗ ಭಾರತದಲ್ಲಿ ಕೋವಿಡ್ ಮೊದಲ ಅಲೆ ಪ್ರಬಲವಾಗಿತ್ತು. ಅಷ್ಟಾದರೂ ಬಿಗ್ ಬಿ ಸೋಂಕಿನಿಂದ ಚೇತರಿಸಿಕೊಂಡ ತಕ್ಷಣ, ಅವರು ಸೆಟ್ ಗೆ ಹಿಂತಿರುಗಿದರು ಮತ್ತು ಎಲ್ಲಾ ಸುರಕ್ಷತಾ ಪ್ರೋಟೋಕಾಲ್ ಗಳೊಂದಿಗೆ ಶೂಟಿಂಗ್ ಪ್ರಾರಂಭಿಸಿದರು.

ಇನ್ನು ಅಮಿತಾಬ್ ಬಚ್ಚನ್ ಇತ್ತೀಚೆಗೆ ದೀಪಿಕಾ ಪಡುಕೋಣೆ ಎದುರು 'ದಿ ಇಂಟರ್ನ್' ಚಿತ್ರದ ಭಾರತೀಯ ರೂಪಾಂತರಕ್ಕಾಗಿ ನಟಿಸಿದ್ದಾರೆ. ಇದಲ್ಲದೆ, ಅವರು "ಝುಂದ್"'ಬ್ರಹ್ಮಾಸ್ತ್ರ', 'ಗುಡ್‌ಬೈ', 'ಮೇ ಡೇ' ಮತ್ತು ಇನ್ನೂ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 


Stay up to date on all the latest ಬಾಲಿವುಡ್ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp