ಗಾಂಧಿ ಜಯಂತಿಯಂದೇ 'ಗೋಡ್ಸೆ' ಸಿನಿಮಾ ಘೋಷಿಸಿದ ಮಹೇಶ್ ಮಂಜ್ರೇಕರ್

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 152ನೇ ಜಯಂತಿ  ಸಂದರ್ಭದಲ್ಲಿ, 'ಗೋಡ್ಸೆ'  ಸಿನಿಮಾ ಜಾಹಿರಾತು ಬಿಡುಗಡೆಯಾಗಿದೆ. ಈ ವಿಶೇಷ ದಿನದಂದು ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಮಹೇಶ್ ಮಂಜ್ರೇಕರ್ ಘೋಷಿಸಿದ್ದಾರೆ.
ಮಹೇಶ್ ಮಂಜ್ರೇಕರ್
ಮಹೇಶ್ ಮಂಜ್ರೇಕರ್

ಮುಂಬೈ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 152ನೇ ಜಯಂತಿ  ಸಂದರ್ಭದಲ್ಲಿ, 'ಗೋಡ್ಸೆ'  ಸಿನಿಮಾ ಜಾಹಿರಾತು ಬಿಡುಗಡೆಯಾಗಿದೆ. ಈ ವಿಶೇಷ ದಿನದಂದು ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಮಹೇಶ್ ಮಂಜ್ರೇಕರ್ ಘೋಷಿಸಿದ್ದಾರೆ.  

ಮಹಾತ್ಮ ಗಾಂಧಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಜೀವನ ಚರಿತ್ರೆಯನ್ನು ಚಿತ್ರಕಥೆ ಆಧರಿಸಿದೆ ಎಂದು ಅವರು ಹೇಳಿದ್ದಾರೆ. ಗಾಂಧಿ ಜಯಂತಿ ಸಂದರ್ಭದಲ್ಲಿ, 'ಗೋಡ್ಸೆ' ಚಿತ್ರದ ಟೀಸರ್ ಅನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಮಹೇಶ್ ಮಂಜ್ರೇಕರ್ ಹಂಚಿಕೊಂಡು, ಸಿನಿಮಾ ಕೆಲಸ ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.

ಮಹೇಶ್ ಮಂಜ್ರೇಕರ್ ನಿರ್ದೇಶನದಲ್ಲಿ ರೂಪುಗೊಳ್ಳಲಿರುವ 'ಗೋಡ್ಸೆ' ಚಿತ್ರವನ್ನು ಸಂದೀಪ್ ಸಿಂಗ್, ರಾಜ್ ಶಾಂಡಿಲ್ಯ ನಿರ್ಮಿಸುತ್ತಿದ್ದಾರೆ. ತಮ್ಮ ಮುಂಬರುವ 'ಗೋಡ್ಸೆ' ಚಿತ್ರಕ್ಕಾಗಿ ಮಹೇಶ್ ಮಂಜ್ರೇಕರ್ ಹಾಗೂ ರಾಜ್ ಶಾಂಡಿಲ್ಯ ಜೊತೆ ಕೈಜೋಡಿಸುವುದಾಗಿ ಸಂಜಯ್‌ ಸಿಂಗ್‌ ಘೋಷಿಸಿದ್ದಾರೆ.  

ಚಿತ್ರವನ್ನು ಸಂದೀಪ್ ಸಿಂಗ್ ನಿರ್ಮಾಣ ಸಂಸ್ಥೆ ಲೆಜೆಂಡ್ ಗ್ಲೋಬಲ್ ಸ್ಟುಡಿಯೋ, ರಾಜ್ ಶಾಂಡಿಲ್ಯ ನಿರ್ಮಾಣ ಸಂಸ್ಥೆ ಥಿಂಕ್ಇಂಕ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ಮಹೇಶ್ ಮಂಜ್ರೇಕರ್ ನಿರ್ದೇಶನದಲ್ಲಿ ಮೂಡಿಬರಲಿರುವ  ಮೂರನೇ ಚಿತ್ರ. ಇದಕ್ಕೂ ಮೊದಲು ಅವರು 'ಸ್ವತಂತ್ರ  ವೀರ್ ಸಾವರ್ಕರ್', 'ವೈಟ್' ಸಿನಿಮಾಗಳಿಗೆ  ಕೆಲಸ ಮಾಡಿದರು.

ನಾಥೂರಾಮ್ ಗೋಡ್ಸೆ ಕಥೆ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಈ ರೀತಿಯ  ಸಿನಿಮಾ ನಿರ್ದೇಶನ ಮಾಡಲು ಸಾಕಷ್ಟು ಧೈರ್ಯ ಬೇಕು. ನಾನು ಸದಾ ಕ್ಲಿಷ್ಟಕರ ವಿಷಯಗಳು, ರಾಜಿಯಾಗದ ಕಥಾಹಂದರಗಳನ್ನು ನಂಬುತ್ತೇನೆ. ಗಾಂಧಿಜೀ ಮೇಲೆ ಗೋಡ್ಸೆ ಗುಂಡಿನ ದಾಳಿ ನಡೆಸಿದ  ವ್ಯಕ್ತಿ ಎಂಬುದನ್ನು ಹೊರತುಪಡಿಸಿ, ಆತನ ಬಗ್ಗೆ ಜನರಿಗೆ ಹೆಚ್ಚಿನ  ಮಾಹಿತಿ ತಿಳಿದಿಲ್ಲ. ಆತನ ಕಥೆಯನ್ನು ಹೇಳುವಾಗ ನಾವು ಆತನನ್ನು ಒಂದು ಪಾತ್ರವಾಗಿ ನೋಡುತ್ತೇವೆ ಆದರೆ, ಯಾರ ವಿರುದ್ಧವೂ ಮಾತನಾಡುವುದಿಲ್ಲ. ಯಾರು ಸರಿ, ಯಾರು ಸರಿ ಇಲ್ಲ ಎಂಬುದನ್ನು ಪ್ರೇಕ್ಷಕರಿಗೆ ವಿವೇಚನೆಗೆ  ಬಿಡುತ್ತೇವೆ ಎಂದು ಮಹೇಶ್ ಮಂಜ್ರೇಕರ್ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com