'ಬಿಗ್ ಬಾಸ್ ಒಟಿಟಿ' ಗೆದ್ದ ದಿವ್ಯ ಅಗರ್ವಾಲ್: 25 ಲಕ್ಷ ರೂ. ನಗದು ಬಹುಮಾನ

ಹಿಂದಿ ಬಿಗ್ ಬಾಸ್ ಒಟಿಟಿಯ ವಿಜಯಶಾಲಿಯಾಗಿ ಧಾರವಾಹಿ ಮತ್ತು ರಿಯಾಲಿಟಿ ಶೋ ಸ್ಟಾರ್ ದಿವ್ಯ ಅಗರ್ವಾಲ್ ಗೆದ್ದಿದ್ದಾರೆ.
ಬಿಗ್ ಬಾಸ್ ಒಟಿಟಿ ಗೆದ್ದ ದಿವ್ಯ ಅಗರ್ವಾಲ್
ಬಿಗ್ ಬಾಸ್ ಒಟಿಟಿ ಗೆದ್ದ ದಿವ್ಯ ಅಗರ್ವಾಲ್

ಮುಂಬೈ: ಹಿಂದಿ ಬಿಗ್ ಬಾಸ್ ಒಟಿಟಿಯ ವಿಜಯಶಾಲಿಯಾಗಿ ಧಾರವಾಹಿ ಮತ್ತು ರಿಯಾಲಿಟಿ ಶೋ ಸ್ಟಾರ್ ದಿವ್ಯ ಅಗರ್ವಾಲ್ ಗೆದ್ದಿದ್ದಾರೆ.

ನಿರ್ದೇಶಕ ಕರಣ್ ಜೋಹರ್ ನಿರ್ದೇಶನದ ಬಿಗ್ ಬಾಸ್ ಒಟಿಟಿಯ ವಿಜಯಶಾಲಿಯನ್ನು ಬಿಗ್ ಬಾಸ್ 7ನ ವಿಜೇತೆ ಗೌಹಾರ್ ಖಾನ್ ಘೋಷಿಸಿದರು.

ಮೂಲತಃ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿರುವ ದಿವ್ಯ ಅಗರ್ವಾಲ್ ಕೊರಿಯೊಗ್ರಾಫರ್ ಆಗಿ ಮತ್ತು ನಂತರ ನಟಿಯಾಗಿ ಗುರುತಿಸಿಕೊಂಡರು. ಈ ಹಿಂದೆ ಅವರು 'ಏಸ್ ಆಫ್ ಸ್ಪೇಸ್1' ರಿಯಾಲಿಟಿ ಶೋವನ್ನು ಗೆದ್ದಿದ್ದರು, ಅಲ್ಲದೆ ಎಂಟಿವಿ ಸ್ಪ್ಲಿಟ್ಸ್ ವಿಲ್ಲ 10 ರಿಯಾಲಿಟಿ ಶೋನ ರನ್ನರ್ ಅಪ್ ಆಗಿದ್ದರು.

25 ಲಕ್ಷ ರೂ ನಗದು ಹಾಗೂ ಬಿಗ್ ಬಾಸ್ ಟ್ರೋಫಿ ಗೆದ್ದಿರುವ ದಿವ್ಯ ಅಗರ್ವಾಲ್ ಸಲ್ಮಾನ್ ಖಾನ್ ನಿರೂಪಣೆಯ ಕಲರ್ಸ್ ವಾಹಿನಿಯಲ್ಲಿ ಸದ್ಯದಲ್ಲಿಯೇ ಪ್ರಸಾರವಾಗುವ ಬಿಗ್ ಬಾಸ್ ನ ನಾಲ್ವರು ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

6 ವಾರಗಳ ಕಾಲ ನಡೆದ ಬಿಗ್ ಬಾಸ್ ಒಟಿಟಿಯಲ್ಲಿ ದಿವ್ಯ ಅಗರ್ವಾಲ್ ಮತ್ತೊಬ್ಬ ಸ್ಪರ್ಧಿ ಶಮಿತಾ ಶೆಟ್ಟಿಯವರೊಡನೆ ಕಿತ್ತಾಟದಿಂದ ಗಮನ ಸೆಳೆದಿದ್ದರು. ಸೋದರಿಯ ಪತಿ ರಾಜ್ ಕುಂದ್ರಾ ಬಂಧನ ನಂತರ ಬಿಗ್ ಬಾಸ್ ಒಟಿಟಿಗೆ ಬಂದ ನಟಿ ಶಮಿತಾ ಶೆಟ್ಟಿ ಶೋದ ಮತ್ತೊಬ್ಬ ಸ್ಪರ್ಧಿ ರಾಕೇಶ್ ಬಾಪಟ್ ಅವರೊಂದಿಗಿನ ಸ್ನೇಹದಿಂದ ಸುದ್ದಿಯಾಗಿದ್ದರು. ಶಮಿತಾ ಮತ್ತು ರಾಕೇಶ್ ಕೊನೆ ಸುತ್ತಿನಲ್ಲಿ ಸ್ಪರ್ಧೆಯಿಂದ ಹೊರಬಿದ್ದರು.

ಶಮಿತಾ ಶೆಟ್ಟಿ ಎರಡನೇ ರನ್ನರ್ ಅಪ್ ಆಗಿದ್ದು ಮೊದಲ ರನ್ನರ್ ಅಪ್ ನಿಶಾಂತ್ ಭಟ್. ಕೊರಿಯೊಗ್ರಾಫರ್ ಆಗಿರುವ ನಿಶಾಂತ್ ಭಟ್ ಸೂಪರ್ ಡ್ಯಾನ್ಸರ್ 3, ಝಲಕ್ ದಿಕ್ ಲಾಜ ಮತ್ತು ನಚ್ ಬಲಿಯೇ ರಿಯಾಲಿಟಿ ಶೋಗಳಿಂದ ಹೆಸರು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com