ಬಾಲಿವುಡ್ ನಟಿ ಸೋನಂ ಕಪೂರ್ - ಆನಂದ್ ಅಹುಜಾ ಮನೆಯಲ್ಲಿ ಕಳ್ಳತನ: 1.41 ಕೋಟಿ ರು. ಚಿನ್ನಾಭರಣ ಕಳವು
ಬಾಲಿವುಡ್ ಖ್ಯಾತ ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಸದ್ಯ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಸಂತೋಷದಲ್ಲಿದ್ದ ಜೋಡಿಗೆ ಕಳ್ಳರು ಶಾಕ್ ನೀಡಿದ್ದಾರೆ.
Published: 09th April 2022 01:54 PM | Last Updated: 09th April 2022 01:54 PM | A+A A-

ಸೋನಂ ಕಪೂರ್ ಮತ್ತು ಆನಂದ್ ಅಹುಜಾ
ಬಾಲಿವುಡ್ ಖ್ಯಾತ ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಸದ್ಯ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.
ಸಂತೋಷದಲ್ಲಿದ್ದ ಜೋಡಿಗೆ ಕಳ್ಳರು ಶಾಕ್ ನೀಡಿದ್ದಾರೆ. ಸೋನಂ- ಆನಂದ್ ದಂಪತಿಯ ದೆಹಲಿ ಮನೆಯನ್ನು ದರೋಡೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ದರೋಡೆಕೋರರು ಮನೆಯಲ್ಲಿದ್ದ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಹಣ ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಸೋನಂ ಕಪೂರ್ ಅವರ ಅತ್ತೆ ತುಘಲಕ್ ರಸ್ತೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸೋನಂ ಮತ್ತು ಅಹುಜಾ ದಂಪತಿಯ ದೆಹಲಿ ಮನೆಯಲ್ಲಿ 1.41 ಕೋಟಿ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೈ ಪ್ರೊಫೈಲ್ ಪ್ರಕರಣವನ್ನು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಕೈಗೆ ತೆಗೆದುಕೊಂಡಿದ್ದು ತನಿಖೆಗೆ ವಿಶೇಷ ತಂಡ ರಚಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ: ಬಾಲಿವುಡ್ ನಟನ ಪ್ಯಾನ್ ಕಾರ್ಡ್ ದುರ್ಬಳಕೆ: ನಟನ ಹೆಸರಲ್ಲಿ ಸಾಲ ಪಡೆದು ವಂಚನೆ
ದೆಹಲಿ ಮನೆಯಲ್ಲಿ ಆನಂದ್ ಅಹುಜಾ ತಂದೆ ಹರೀಶ್, ತಾಯಿ ಪ್ರಿಯಾ ಅಹುಜಾ, ಅಜ್ಜಿ ಸರಳಾ ಅಹುಜಾ ವಾಸವಾಗಿದ್ದರು ಎನ್ನಲಾಗಿದೆ. ಸೋನಂ ಕಪೂರ್ ಸದ್ಯ ತನ್ನ ತಂದೆ ಮನೆ ಮುಂಬೈನಲ್ಲಿರುವ ಅನಿಲ್ ಕಪೂರ್ ಮನೆಯಲ್ಲಿದ್ದಾರೆ.
ಸದ್ಯ ಪೊಲೀಸರು ತನಿಖೆ ಪ್ರಾರಂಭಾಡಿದ್ದು, ಆನಂದ್ ಮನೆಯ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಚಾಲಕರು, ತೋಟಗಾರರು ಮತ್ತು ಇತರ ಕಾರ್ಮಿಕರು ಸೇರಿ ಒಟ್ಟು 25 ಮಂದಿಯನ್ನು ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ಮುಂದುವರೆದಿದ್ದು ಇನ್ನು ಆರೋಪಿಗಳು ಪತ್ತೆಯಾಗಿಲ್ಲ. ಫೆಬ್ರವರಿ 11ರಂದೇ ಕಳ್ಳವಾಗಿದ್ದು ಫೆಬ್ರವರಿ 23ರಂದು ಪ್ರಕರಣ ದಾಖಲಾಗಿದೆ.