ರಣಬೀರ್ ಕಪೂರ್- ಆಲಿಯಾ ಭಟ್ ಮದುವೆ ಆರತಕ್ಷತೆ ಇಲ್ಲ: ಖಚಿತಪಡಿಸಿದ ನೀತು ಕಪೂರ್
ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಲವ್ ಬರ್ಡ್ಸ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯ ಆರತಕ್ಷತೆ ಸೇರಿದಂತೆ ಮದುವೆ ನಂತರದ ಯಾವುದೇ ಕಾರ್ಯಕ್ರಮ ಇರುವುದಿಲ್ಲ...
Published: 15th April 2022 08:55 PM | Last Updated: 16th April 2022 01:16 PM | A+A A-

ಆಲಿಯಾ ಭಟ್ - ರಣಬೀರ್ ಕಪೂರ್ - ನೀತು ಕಪೂರ್
ಮುಂಬೈ: ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಲವ್ ಬರ್ಡ್ಸ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯ ಆರತಕ್ಷತೆ ಸೇರಿದಂತೆ ಮದುವೆ ನಂತರದ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ರಣಬೀರ್ ಕಪೂರ್ ತಾಯಿ ನೀತು ಕಪೂರ್ ಅವರು ಹೇಳಿದ್ದಾರೆ.
ಮುಂಬೈನ ಪಾಲಿ ಹಿಲ್ಸ್ನಲ್ಲಿರುವ ಅಪಾರ್ಟ್ಮೆಂಟ್ ಸಂಕೀರ್ಣ ವಾಸ್ತುವಿನಲ್ಲಿ ಈ ತಾರಾ ಜೋಡಿ ಸಪ್ತಪದಿ ತುಳಿದ ಕೆಲವೇ ಗಂಟೆಗಳ ನಂತರ, ರಣಬೀರ್ ಕಪೂರ್ ತಾಯಿ ನೀತು ಕಪೂರ್, ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ಮತ್ತು ಸೋದರ ಮಾವ ಭರತ್ ಸಾಹ್ನಿ ಸೇರಿದಂತೆ ವರನ ಕುಟುಂಬ ಸದಸ್ಯರು ಮಾಧ್ಯಮಗಳಿಗೆ ಧನ್ಯವಾದ ಹೇಳಿದರು.
ಇದನ್ನು ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ ಭಟ್ - ರಣಬೀರ್ ಕಪೂರ್
ಈ ವೇಳೆ ತಾರಾ ಜೋಡಿಯ ಆರತಕ್ಷತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನೀತು ಕಪೂರ್ ಅವರು, ಈಗ ಆಲಿಯಾ ಹಾಗೂ ರಣಬೀರ್ ಎಲ್ಲರೂ ಖಷಿಯಾಗಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ, ಮದುವೆ ಮುಗಿದಿರುವುದರಿಂದ ಈಗ ನೀವೆಲ್ಲರೂ ಶಾಂತಿಯಿಂದ ಮಲಗಬಹುದು ಎಂದು ಹೇಳಿದ್ದಾರೆ.
ಈ ಹಿಂದೆ ಏಪ್ರಿಲ್ 17 ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಮದುವೆಯ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿತ್ತು.