ಆಲಿಯಾ ಭಟ್ ಮದುವೆಯಲ್ಲಿ ತೊಟ್ಟಿದ್ದ ಲೆಹೆಂಗಾ ಚಿನ್ನ, ಬೆಳ್ಳಿಯಿಂದ ಮಾಡಿದ್ದಂತೆ!
ಬಾಲಿವುಡ್ ಸ್ಟಾರ್ ಗಳಾದ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಮದುವೆಯಾಗಿ ನಾಲ್ಕು ದಿನಗಳು ಕಳೆದರೂ ಅವರ ಮದುವೆಯ ಸಂಭ್ರಮದ ಮಾತುಗಳು ಇನ್ನು ಹಸಿಹಸಿಯಾಗಿಯೇ ಇವೆ. ಮದುವೆಯ ಮೆಹಂದಿ...
Published: 18th April 2022 08:38 PM | Last Updated: 18th April 2022 08:38 PM | A+A A-

ಆಲಿಯಾ ಭಟ್
ಮುಂಬೈ: ಬಾಲಿವುಡ್ ಸ್ಟಾರ್ ಗಳಾದ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಮದುವೆಯಾಗಿ ನಾಲ್ಕು ದಿನಗಳು ಕಳೆದರೂ ಅವರ ಮದುವೆಯ ಸಂಭ್ರಮದ ಮಾತುಗಳು ಇನ್ನು ಹಸಿಹಸಿಯಾಗಿಯೇ ಇವೆ. ಮದುವೆಯ ಮೆಹಂದಿ ಶಾಸ್ತ್ರ, ನೃತ್ಯ, ಅವರ ಬಟ್ಟೆ, ಮದುವೆಯಾದ ಸ್ಥಳ, ಮದುವೆಯ ಫೋಟೋಗಳು ಹೀಗೆ ಒಂದಲ್ಲಾ ಒಂದು ವೈರಲ್ ಆಗುತ್ತಿವೆ.
ಸರಳ, ಸುಂದರವಾಗಿ ವಿವಾಹವಾದ ಸೆಲೆಬ್ರೆಟಿಗಳ ಬಟ್ಟೆ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಆಲಿಯಾ ಮುಹೂರ್ತಕ್ಕೆ ಉಟ್ಟಿದ್ದ ಸೀರೆ, ಸೀರೆ ವಿನ್ಯಾಸ, ಕೈಗೆ ಹಾಕಿದ ಬಳೆಗಳು, ಸರಳ ಮೇಕಪ್ ಹೀಗೆ ಬಹಳ ಚರ್ಚೆಯಾಗುತ್ತಿದೆ. ಇದರ ಜೊತೆಗೆ ರಣವೀರ್ ಧರಿಸಿದ್ದ ಬಟ್ಟೆಯ ಬ್ರ್ಯಾಂಡ್, ಡಿಸೈನರ್….ಇದೀಗ ಆಲಿಯಾ ಮೆಹಂದಿ ವೇಳೆ ತೊಟ್ಟಿದ್ದ ಗಾಢ ಗುಲಾಬಿ ಬಣ್ಣದ ಲೆಹೆಂಗಾದ ಡಿಸೈನರ್ ಯಾರು, ಯಾವ ವಿನ್ಯಾಸ, ಹೊಲಿಯಲು ತೆಗೆದುಕೊಂಡ ಅವಧಿ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದ್ರೆ ಇಲ್ಲಿದೆ ಆಲಿಯಾ ಲೆಹೆಂಗಾ ವಿವರ.
ಇದನ್ನು ಓದಿ: ಸದ್ಯಕ್ಕಿಲ್ಲ ರಣಬೀರ್-ಆಲಿಯಾ ಹನಿಮೂನ್, ಅವರ ಪ್ರಣಯಕ್ಕೆ ಅಡ್ಡಿಯಾಗಿದ್ದೇನು?
ಹೌದು ಆಲಿಯಾ ತೊಟ್ಟಿದ್ದ ಲೆಹೆಂಗಾ ವಿನ್ಯಾಸ ಮಾಡಿದ್ದು, ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ. ಇದನ್ನು ಹೊಲಿಯಲು ಬರೋಬ್ಬರಿ ೩೦೦೦ ಗಂಟೆಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೇ ಇದು ಮಾಮೂಲಿಯ ಲೆಹೆಂಗಾ ಅಲ್ಲ. ಇದರಲ್ಲಿ ಚಿನ್ನ, ಬೆಳ್ಳಿಯಿಂದ ಮಾಡಿದ ಕುಸುರಿಯಿದೆ. ಇದರಲ್ಲಿ ೧೮೦ ಪ್ಯಾಚ್ ಗಳಿದ್ದು, ಶುದ್ಧ ಚಿನ್ನ ಬೆಳ್ಳಿಯ ಕುಸುರಿ ಲೆಹಂಗಾದ ಅಂದವನ್ನು ಹೆಚ್ಚಿಸಿದೆ. ಅಲ್ಲದೇ ಆಲಿಯಾ ಅಂದವನ್ನು ಇಮ್ಮಡಿಗೊಳಿಸಿದೆ. ಜೊತೆಗೆ ಬ್ಯಾಕ್ ಬ್ಲೌಸ್ ಲೆಹೆಂಗಾಕ್ಕೆ ಮತ್ತಷ್ಟು ಮೆರಗು ತಂದಿದೆ.