ಬಾಲಿವುಡ್ ಗೆ ಸಾರಾ ತೆಂಡೂಲ್ಕರ್?
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿ. ಸ್ಟಾರ್ ಕಿಡ್, ಆದಾಗ್ಯೂ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಆಸಕ್ತಿ ಹೊಂದಿದ್ದಾರೆ.
Published: 25th April 2022 06:24 PM | Last Updated: 25th April 2022 07:08 PM | A+A A-

ಸಾರಾ ತೆಂಡೂಲ್ಕರ್
ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿ. ಸ್ಟಾರ್ ಕಿಡ್, ಆದಾಗ್ಯೂ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಆಸಕ್ತಿ ಹೊಂದಿದ್ದಾರೆ ಮತ್ತು ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾರಾ ಈ ಹಿಂದೆ ಬ್ರ್ಯಾಂಡ್ ಎಂಡಾರ್ಸ್ ಮೆಂಟ್‌ಗಳಲ್ಲಿಯೂ ಕಾಣಿಸಿಕೊಂಡಿದ್ದರು.
ಬಾಲಿವುಡ್ ಲೈಫ್ ನ ಮೂಲದ ಪ್ರಕಾರ, ಸಾರಾ ಶೀಘ್ರದಲ್ಲೇ ನಟನೆಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ ಮತ್ತು ಆಕೆಯ ಪೋಷಕರಿಬ್ಬರೂ ಅವಳ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂಬ ಮಾತು ಸಹ ಇದೆ.
“ಸಾರಾ ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಬಹುದು. ಅವರು ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ ಮತ್ತು ಕೆಲವು ಬ್ರಾಂಡ್ ಎಂಡಾರ್ಸ್ ಮೆಂಟ್‌ಗಳನ್ನು ಮಾಡುವುದರಿಂದ ಕೆಲವು ಆ್ಯಕ್ಟಿಂಗ್ ಪಾಠಗಳನ್ನು ಸಹ ತೆಗೆದುಕೊಂಡಿದ್ದಾರೆ. ಸಾರಾ ಲಂಡನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನವನ್ನು ಮಾಡಿರುವ ಅವರು ವೃತ್ತಿಜೀವನವನ್ನು ಗ್ಲಾಮರ್ ಜಗತ್ತಿನಲ್ಲಿ ಕಂಡುಕೊಳ್ಳಲು ಆಸಕ್ತಿ ಹೊಂದಿದ್ದಾಳೆ”ಎಂದು ಮೂಲಗಳು ಹೇಳುತ್ತಿವೆ
ಸಾರಾ ತೆಂಡೂಲ್ಕರ್ ಈ ಹಿಂದೆ ನಟ ಶಾಹಿದ್ ಕಪೂರ್ ಎದುರು ಬಾಲಿವುಡ್‌ಗೆ ಪಾದಾರ್ಪಣೆ ಮಾಡುವುದಾಗಿ ವರದಿಯಾಗಿತ್ತು. ಆದರೆ, ಆ ಸಮಯದಲ್ಲಿ ಆಕೆಯ ತಂದೆ ಸಚಿನ್ ಇದನ್ನು ವದಂತಿ ಎಂದು ತಳ್ಳಿಹಾಕಿದ್ದರು ಮತ್ತು “ನನ್ನ ಮಗಳು ಸಾರಾ ತನ್ನ ಶೈಕ್ಷಣಿಕ ಜೀವನವನ್ನು ಆನಂದಿಸುತ್ತಿದ್ದಾಳೆ. ಅವರು ಚಲನಚಿತ್ರಗಳಿಗೆ ಸೇರುವ ಬಗ್ಗೆ ಎಲ್ಲಾ ಆಧಾರರಹಿತ ಊಹಾಪೋಹಗಳಿಂದ ಬೇಸರಗೊಂಡಿದ್ದಾರೆ ಎಂದು ಹೇಳಿದ್ದರು.
ಸಾರಾ ಈಗಾಗಲೇ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ 1.8 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಸಾರಾ ಅವರ ಕಿರಿಯ ಸಹೋದರ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆಯ ಹಾದಿಯನ್ನು ಅನುಸರಿಸುತ್ತಿದ್ದಾರೆ ಮತ್ತು ಕ್ರಿಕೆಟಿಗರಾಗಿ ವೃತ್ತಿಜೀವನ ಮಾಡಲು ಸಜ್ಜಾಗುತ್ತಿದ್ದಾರೆ. 2018 ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ತಮ್ಮ ಅಂಡರ್-19 ಚೊಚ್ಚಲ ಪಂದ್ಯವನ್ನು ಆಡಿದರು. ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ 15 ಜನವರಿ 2021ರಂದು ತಮ್ಮ ಟ್ವೆಂಟಿ 20 ಚೊಚ್ಚಲ ಪಂದ್ಯವನ್ನು ಆಡಿದರು. ಅರ್ಜುನ್ ಪ್ರಸ್ತುತ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.