ಹಿಂದಿ ಸಿನಿಮಾ ನಟ, ರಂಗಭೂಮಿ ಕಲಾವಿದ ಮಿಥಿಲೇಶ್ ಚತುರ್ವೇದಿ ನಿಧನ
ಬಾಲಿವುಡ್ ನಟ, ರಂಗಭೂಮಿ ಕಲಾವಿದ, ಹೃತಿಕ್ ರೋಶನ್ ಅವರ 'ಕೋಯಿ ಮಿಲ್ ಗಯಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ನಟ ಮಿಥಿಲೇಶ್ ಚತುರ್ವೇದಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
Published: 04th August 2022 10:45 AM | Last Updated: 04th August 2022 10:45 AM | A+A A-

ಮಿಥಿಲೇಶ್ ಚತುರ್ವೇದಿ
ಬಾಲಿವುಡ್ ನಟ, ರಂಗಭೂಮಿ ಕಲಾವಿದ, ಹೃತಿಕ್ ರೋಶನ್ ಅವರ 'ಕೋಯಿ ಮಿಲ್ ಗಯಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ನಟ ಮಿಥಿಲೇಶ್ ಚತುರ್ವೇದಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಿಂದಿ ಸಿನಿಮಾ ನಟ, ರಂಗಭೂಮಿ ಕಲಾವಿದ ಮಿಥಿಲೇಶ್ ಚತುರ್ವೇದಿ ಅವರು ಕಳೆದ ಸಂಜೆ ( ಜುಲೈ 3, ಬುಧವಾರ ) ನಿಧನರಾಗಿದ್ದಾರೆ. ಹೃದಯಾಘಾತದಿಂದ ಮಿಥಿಲೇಶ್ ಅವರು ಲಕ್ನೋದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ದಶಕಗಳ ಸಿನಿಮಾ ರಂಗದಲ್ಲಿದ್ದ ಮಿಥಿಲೇಶ್ ಅವರು ಹೃತಿಕ್ ರೋಶನ್ ಅವರ 'ಕೋಯಿ ಮಿಲ್ ಗಯಾ' ಸನ್ನಿ ಡಿಯೋಲ್ ಜೊತೆಗೆ 'ಗದರ್ ಏಕ್ ಪ್ರೇಮ್ ಕಥಾ', 'ಸತ್ಯ', 'ಬಂಟಿ ಔರ್ ಬಬ್ಲಿ', 'ಕ್ರಿಶ್', 'ತಾಲ್', 'ರೆಡಿ', 'ಅಶೋಕ್', 'ಫಿಜಾ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಅವರ ನಿಧನಕ್ಕೆ ಹಲವು ಕಾಲವಿದರು ಸಂತಾಪ ಸೂಚಿಸಿದ್ದಾರೆ.
'Scam 1992' ಸಿರೀಸ್‌ನಲ್ಲಿ ನಟಿಸಿದ್ದ ಅವರು ಮುಂದಿನ ದಿನಗಳಲ್ಲಿ ಇನ್ನೊಂದು ವೆಬ್ ಸಿರೀಸ್‌ನಲ್ಲಿ ನಟಿಸುವ ಬಗ್ಗೆಯೂ ಮಾತುಕತೆ ಮಾಡಿಕೊಂಡಿದ್ದರು ಎನ್ನಲಾಗಿದೆ.