ನನ್ನ ಸಿನಿಮಾಗಳು ಸೋತಿರುವುದಕ್ಕೆ ನಾನೇ ಕಾರಣ: ಸಿನಿಮಾಗಳ ಸರಣಿ ಫೇಲ್ಯೂರ್ ಬಗ್ಗೆ ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಇತ್ತೀಚಿನ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇದೀಗ ಅಕ್ಷಯ್ ಕುಮಾರ್, ನನ್ನದೇ ತಪ್ಪು ಎಂದಿದ್ದಾರೆ.
Published: 22nd August 2022 03:22 PM | Last Updated: 22nd August 2022 03:22 PM | A+A A-

ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಇತ್ತೀಚಿನ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇದೀಗ ಅಕ್ಷಯ್ ಕುಮಾರ್, ನನ್ನದೇ ತಪ್ಪು ಎಂದಿದ್ದಾರೆ.
ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ ಸಿನಿಮಾಗಳೆಲ್ಲವೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೂ, ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಸಿನಿಮಾಗಳು ಆಯಾ ಬಜೆಟ್‌ಗಳನ್ನು ಮರುಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಸಿನಿಮಾಗಳು ಯಶಸ್ವಿಯಾಗಿಲ್ಲ ಎನ್ನಲಾಗಿತ್ತು.
ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಜೊತೆಗೆ, ರಕ್ಷಾ ಬಂಧನ್ ಸಿನಿಮಾಗೆ ಆನ್‌ಲೈನ್ ಬಹಿಷ್ಕಾರ ಅಭಿಯಾನ ಎದುರಾಗಿತ್ತು. ಸಾಂಕ್ರಾಮಿಕ ರೋಗದ ನಂತರದ ವೇಳೆ ಸಾಮಾನ್ಯವಾಗಿ ಹಿಂದಿ ಚಲನಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲು ಹೆಣಗಾಡುತ್ತಿವೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ ತಮ್ಮ ಮುಂದಿನ ಸಿನಿಮಾ ಕಟ್‌ಪುಟ್ಲಿ ಟ್ರೈಲರ್ ಬಿಡುಗಡೆ (Cuttputlli) ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್, 'ನನ್ನ ನಟನೆಯ ಚಿತ್ರಗಳು ನೀರೀಕ್ಷಿಸಿದಂತೆ ಯಶಸ್ವಿಯಾಗುತ್ತಿಲ್ಲ, ಅದು ನಮ್ಮ ತಪ್ಪು, ಅದು ನನ್ನ ತಪ್ಪು. ನಾನು ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಪ್ರೇಕ್ಷಕರು ಏನನ್ನು ಬಯಸುತ್ತಾರೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬೇಕು. ನಾನು ಯೋಚಿಸುವ ರೀತಿ ಮತ್ತು ನಾನು ಯಾವ ರೀತಿಯ ಚಲನಚಿತ್ರಗಳನ್ನು ಮಾಡಬೇಕು ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಈ ಸಿನಿಮಾಗಳ ಸೋಲಿಗೆ ನನ್ನನ್ನು ಹೊರತುಪಡಿಸಿ ಬೇರೆ ಯಾರನ್ನೂ ದೂಷಿಸಬಾರದು' ಎಂದಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್': ಬಿಜೆಪಿ ಆಡಳಿತವಿರುವ ಉ.ಪ್ರ, ಮ.ಪ್ರ, ಉತ್ತರಾಖಂಡಗಳಲ್ಲಿ ತೆರಿಗೆ ವಿನಾಯಿತಿ
ಚಿತ್ರಮಂದಿರಗಳಿಗೆ ಹೋಲಿಸಿದರೆ OTT ಗಳಲ್ಲಿ ಚಲನಚಿತ್ರಗಳನ್ನು ಬಿಡುಗಡೆ ಮಾಡುವುದು ಸುರಕ್ಷಿತ ಆಯ್ಕೆ ಎಂಬುದನ್ನು ಅಕ್ಷಯ್ ಕುಮಾರ್ ನಿರಾಕರಿಸಿದರು.
'ಇದು ಸುರಕ್ಷಿತವಲ್ಲ. (OTT) ಜನರು ಚಲನಚಿತ್ರವನ್ನು ಇಷ್ಟಪಡುತ್ತಾರೋ ಇಲ್ಲವೋ ಎಂಬುದು ತಿಳಿಯಬೇಕು. ಇದು ಸುರಕ್ಷಿತ ಎಂದಲ್ಲ. ಇಲ್ಲಿ ಕೂಡ ಮಾಧ್ಯಮಗಳು, ವಿಮರ್ಶಕರು ಮತ್ತು ಪ್ರೇಕ್ಷಕರು ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಅವರು ಇಷ್ಟಪಟ್ಟರೂ ಅಥವಾ ಇಷ್ಟವಾಗದಿದ್ದರೂ ತಮ್ಮ ಅಭಿಪ್ರಾಯವನ್ನು ಅವರು ಹಿಂಚಿಕೊಳ್ಳುತ್ತಾರೆ. ಒಟಿಟಿಯಲ್ಲಿ ಬಿಡುಗಡೆ ಮಾಡುವುದು ಸುರಕ್ಷಿತ ಎಂದೇನೂ ಇಲ್ಲ. ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಅಷ್ಟೆ' ಎಂದು ಅಕ್ಷಯ್ ತಿಳಿಸಿದರು.
ಇದನ್ನೂ ಓದಿ: ಅಂದು 'ಪದ್ಮಾವತ್' ಇಂದು 'ಪೃಥ್ವಿರಾಜ್': ಅಕ್ಷಯ್ ಕುಮಾರ್ ಹೊಸ ಚಿತ್ರದ ಶೀರ್ಷಿಕೆ ಬದಲಾವಣೆಗೆ ಕರ್ಣಿ ಸೇನಾ ಆಗ್ರಹ!
ರಂಜಿತ್ ಎಂ ತಿವಾರಿ ನಿರ್ದೇಶಿಸಿರುವ ಕಟ್‌ಪುಟ್ಲಿ ಸಿನಿಮಾವು 2018ರ ತಮಿಳು ಸಿನಿಮಾ ರಾತ್ಸಾಸನ್‌ನ ಹಿಂದಿ ರಿಮೇಕ್ ಆಗಿದೆ. ಚಿತ್ರದಲ್ಲಿ ಅಕ್ಷಯ್ ಅವರು ಸರಣಿ ಕೊಲೆಗಾರನ ಹುಡುಕಾಟದಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸೆಪ್ಟೆಂಬರ್ 2 ರಂದು ಬಿಡುಗಡೆಯಾಗಲಿದೆ.