'ತಲೈವಿ' ಚಿತ್ರದ ಅಭಿನಯಕ್ಕೆ ನಾಮ ನಿರ್ದೇಶನ: ಫಿಲ್ಮ್ಫೇರ್ ವಿರುದ್ಧ ದಾವೆ ಹೂಡಲು ಕಂಗನಾ ರನಾವತ್ ನಿರ್ಧಾರ

ತಲೈವಿ ಚಿತ್ರದ ಅಭಿನಯಕ್ಕಾಗಿ ತಮ್ಮ ಹೆಸರನ್ನು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿರುವ ಫಿಲ್ಮ್‌ಫೇರ್ ನಿಯತಕಾಲಿಕೆ ವಿರುದ್ಧ ಮೊಕದ್ದಮೆ ಹೂಡಲು ಬಾಲಿವುಡ್ ನಟಿ ಕಂಗನಾ ರನಾವತ್ ನಿರ್ಧರಿಸಿದ್ದಾರೆ.
ತಲೈವಿ ಚಿತ್ರದಲ್ಲಿ ಕಂಗನಾ ರನಾವತ್
ತಲೈವಿ ಚಿತ್ರದಲ್ಲಿ ಕಂಗನಾ ರನಾವತ್

ಚೆನ್ನೈ: ತಲೈವಿ ಚಿತ್ರದ ಅಭಿನಯಕ್ಕಾಗಿ ತಮ್ಮ ಹೆಸರನ್ನು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿರುವ ಫಿಲ್ಮ್‌ಫೇರ್ ನಿಯತಕಾಲಿಕೆ ವಿರುದ್ಧ ಮೊಕದ್ದಮೆ ಹೂಡಲು ಬಾಲಿವುಡ್ ನಟಿ ಕಂಗನಾ ರನಾವತ್ ನಿರ್ಧರಿಸಿದ್ದಾರೆ.

ಈ ಬಗ್ಗೆ ಇನ್ಸ್ಚಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಫಿಲ್ಮ್‌ಫೇರ್ ಪ್ರಶಸ್ತಿಗಳು ಅನೈತಿಕ, ಭ್ರಷ್ಟ ಮತ್ತು ಅನ್ಯಾಯ ಎಂದು ಅವರು ಗುಡುಗಿದ್ದಾರೆ. ತಾವು ನಿಷೇಧಿಸಿದ ನಂತರವೂ ಪ್ರಶಸ್ತಿಗೆ ತಮ್ಮ ಚಿತ್ರವನ್ನು ನಾಮಾಂಕಿತ ಮಾಡಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಸಹ ಕಂಗನಾ ಬರೆದುಕೊಂಡಿದ್ದಾರೆ.

ನಾನು 2014 ರಿಂದ ಫಿಲ್ಮ್ ಫೇರ್ ನಂತಹ ಅನೈತಿಕ, ಭ್ರಷ್ಟ ಮತ್ತು ಸಂಪೂರ್ಣ ಅನ್ಯಾಯದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಷೇಧಿಸಿದ್ದೇನೆ, ಆದರೆ ಈ ವರ್ಷ ಅವರ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಅವರಿಂದ ಅನೇಕ ಕರೆಗಳು ಬರುತ್ತಿವೆ, ನನಗೆ ತಲೈವಿ ಚಿತ್ರಕ್ಕಾಗಿ ಪ್ರಶಸ್ತಿ ನೀಡಲು ಬಯಸುತ್ತಾರೆ. ನನ್ನನ್ನು ನಾಮ ನಿರ್ದೇಶನ ಮಾಡುತ್ತಿರುವುದು ನೋಡಿ ಆಘಾತಕ್ಕೊಳಗಾಗಿದ್ದೇನೆ. ಇಂತಹ ಭ್ರಷ್ಟ ಆಚರಣೆಗಳನ್ನು ಪ್ರೋತ್ಸಾಹಿಸುವುದು ನನ್ನ ಘನತೆ, ಕೆಲಸದ ನೀತಿ ಮತ್ತು ಮೌಲ್ಯ ವ್ಯವಸ್ಥೆಗೆ ವಿರುದ್ಧವಾಗಿದೆ. ಅದಕ್ಕಾಗಿ ನಾನು filmfare ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕಿಯಾರಾ ಅಡ್ವಾಣಿ, ಕೃತಿ ಸನೋನ್, ಪರಿಣಿತಿ ಚೋಪ್ರಾ, ತಾಪ್ಸಿ ಪನ್ನು ಮತ್ತು ವಿದ್ಯಾ ಬಾಲನ್ ಅವರೊಂದಿಗೆ ತಲೈವಿಗಾಗಿ ಕಂಗನಾ ಈ ವರ್ಷ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿಯಾಗಿ ನಾಮನಿರ್ದೇಶನಗೊಂಡಿದ್ದಾರೆ. ಅವರ ಸಹನಟ ರಾಜ್ ಅರ್ಜುನ್ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ನೀತಾ ಲುಲ್ಲಾ ಮತ್ತು ದೀಪಾಲಿ ನೂರ್ ಅತ್ಯುತ್ತಮ ವಸ್ತ್ರ ವಿನ್ಯಾಸ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. Unifi ಮೀಡಿಯಾ ಅತ್ಯುತ್ತಮ VFX ಅನುಮೋದನೆಯನ್ನು ಗಳಿಸಿದೆ.

ಕಂಗನಾ ರನಾವತ್ ತಮ್ಮ ನಿರ್ದೇಶನದ ಎಮರ್ಜೆನ್ಸಿ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಅದರಲ್ಲಿ ಅವರು ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆ, ಅನುಪಮ್ ಖೇರ್ ಮತ್ತು ಮಹಿಮಾ ಚೌಧರಿ ಸಹ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com