'ಪಾಕಿಸ್ತಾನಿ' ಸಿನಿಮಾದಲ್ಲಿ ಕೆಲಸ ಮಾಡಲು ನನಗೆ ಇಷ್ಟ: ಕಿಡಿ ಹೊತ್ತಿಸಿದ ರಣಬೀರ್ ಕಪೂರ್ ಹೇಳಿಕೆ
ಕಲಾವಿದರಿಗೆ ಯಾವುದೇ ಗಡಿ ಮತ್ತು ಗೋಡೆಯ ಗೊಡವೆ ಇರಬಾರದು. ಕಲಾವಿದರಿಗೆ ಯಾವುದೇ ಬೌಂಡರಿ ಇಲ್ಲ. ಹಾಗಾಗಿ ಅಂಥದ್ದೊಂದು ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
Published: 13th December 2022 12:51 PM | Last Updated: 13th December 2022 01:22 PM | A+A A-

ರಣಬೀರ್ ಕಪೂರ್
ಹೆಸರಾಂತ ನಟ ರಣಬೀರ್ ಕಪೂರ್ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣಬೀರ್ ಗೆ ‘ಪಾಕಿಸ್ತಾನ ಜೊತೆ ಸಿನಿಮಾ ಮಾಡುವಿರಾ?’ ಎಂದು ಪ್ರಶ್ನೆಯೊಂದು ತೂರಿ ಬಂತು. ಕ್ಷಣವೂ ಯೋಚಿಸದೇ ತಾವು ಸಿನಿಮಾ ಮಾಡುವುದಾಗಿ ಹೇಳಿದರು.
ಮುಂದುವರೆದು ಮಾತನಾಡಿದ ರಣಬೀರ್, ‘ಕಲಾವಿದರಿಗೆ ಯಾವುದೇ ಗಡಿ ಮತ್ತು ಗೋಡೆಯ ಗೊಡವೆ ಇರಬಾರದು. ಕಲಾವಿದರಿಗೆ ಯಾವುದೇ ಬೌಂಡರಿ ಇಲ್ಲ. ಹಾಗಾಗಿ ಅಂಥದ್ದೊಂದು ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ರಣಬೀರ್ ಈ ವಿಷಯದ ಕುರಿತು ಮಾತನಾಡುತ್ತಿದ್ದಂತೆಯೇ ಪರ ವಿರೋಧದ ಮಾತುಗಳು ಕೇಳಿ ಬಂದಿವೆ. ನಿನಗೆ ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಆ ದೇಶದ ಪೌರತ್ವ ಪಡೆದುಕೊಂಡು ಅಲ್ಲಿಯೇ ಇರು ಎಂದು ಕೆಲವರು ಖಾರವಾಗಿಯೇ ನುಡಿದಿದ್ದಾರೆ.
ಇನ್ನೂ ಕೆಲವರು ರಣಬೀರ್ ಪರವಾಗಿಯೂ ನಿಂತಿದ್ದು, ಕಲಾವಿದನಿಗೆ ಗಡಿ ರೇಖೆಗಳು ಇಲ್ಲ. ಅವರು ಸಾಂಸ್ಕೃತಿಕ ರಾಯಭಾರಿಗಳು. ಹಾಗಾಗಿ ಅವರ ಮಾತನ್ನು ಬೇರೆ ರೀತಿಯಲ್ಲಿ ಕಲ್ಪಿಸಿಕೊಳ್ಳಬೇಡಿ ಎಂದು ಅವರ ಫ್ಯಾನ್ಸ್ ಮನವಿ ಮಾಡಿದ್ದಾರೆ. ಜೊತೆಗೆ ಯಾವ ಕಲಾವಿದ, ಎಲ್ಲಿಗೆ ಬೇಕಾದರೂ ಹೋಗಬಹುದು. ಅವರು ಸ್ವತಂತ್ರರು. ರಣಬೀರ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಸಾಂಸ್ಕೃತಿಕ ಕೊಡುಕೊಳ್ಳುವಿಕೆ ನಡೆಯಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.