'Pathaan' row: ಏನೇ ಆದರು ನಾವು ಪಾಸಿಟಿವ್ ಆಗಿ ಇರುತ್ತೇವೆ: ಪಠಾಣ್ ವಿವಾದ ಕುರಿತು ಶಾರುಖ್ ಖಾನ್
ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡು ವಿವಾದಕ್ಕೀಡಾಗಿರುವಂತೆಯೇ ಈ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಶಾರುಖ್ ಖಾನ್, ಏನೇ ಆದರು ನಾವು ಪಾಸಿಟಿವ್ ಆಗಿ ಇರುತ್ತೇವೆ ಎಂದು ಹೇಳಿದ್ದಾರೆ.
Published: 15th December 2022 10:30 PM | Last Updated: 15th December 2022 10:30 PM | A+A A-

ನಟ ಶಾರುಖ್ ಖಾನ್
ಮುಂಬೈ: ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡು ವಿವಾದಕ್ಕೀಡಾಗಿರುವಂತೆಯೇ ಈ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಶಾರುಖ್ ಖಾನ್, ಏನೇ ಆದರು ನಾವು ಪಾಸಿಟಿವ್ ಆಗಿ ಇರುತ್ತೇವೆ ಎಂದು ಹೇಳಿದ್ದಾರೆ.
ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಕೆಐಎಫ್‌ಎಫ್) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ಸುತ್ತಮುತ್ತಲೂ ಏನೇ ನಡೆಯಲಿ, ನಮ್ಮಂತಹ ಜನರು ಧನಾತ್ಮಕ ಮನೋಭಾವದಿಂದ ಇರುತ್ತೇವೆ. ವಿವಿಧ ಜಾತಿ, ಬಣ್ಣ, ಧರ್ಮಗಳ ಜನರು ಪರಸ್ಪರ ಅರಿತುಕೊಳ್ಳಲು ಸಿನಿಮಾ ಉತ್ತಮ ವೇದಿಕೆಯಾಗಿದೆ ಎಂದು ಶಾರುಖ್ ಹೇಳಿದ್ದಾರೆ. ಪಠಾಣ್ ಚಿತ್ರದ 'ಬೇಷರಮ್ ರಂಗ್' ಹಾಡಿನ ವಿವಾದ ಭುಗಿಲೆದ್ದ ಬೆನ್ನಲ್ಲೇ ಶಾರುಖ್ ಈ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ದೀಪಿಕಾ 'ಬೇಷರಂ' ಹಾಡಿಗೆ ಮಧ್ಯ ಪ್ರದೇಶ ಗೃಹ ಸಚಿವ ಕಿಡಿ, ಪಠಾಣ್ ಚಿತ್ರ ನಿಷೇಧಿಸುವ ಎಚ್ಚರಿಕೆ
'ಸಿನಿಮಾವು ಏಕತೆ, ಸಹೋದರತ್ವ ಮತ್ತು ಮಾನವೀಯ ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತದೆ. ಸಹೋದರತ್ವದ ಮಾನವೀಯತೆಯ ಅಪಾರ ಸಾಮರ್ಥ್ಯವನ್ನು ಸಿನಿಮಾ ಮುನ್ನೆಲೆಗೆ ತರುತ್ತದೆ. ಮನುಕುಲದ ದೊಡ್ಡ ಸ್ವಭಾವದ ಬಗ್ಗೆ ಮಾತನಾಡುವ ಪ್ರತಿ-ನಿರೂಪಣೆಯನ್ನು ಉಳಿಸಿಕೊಳ್ಳಲು ಸಿನಿಮಾ ಅತ್ಯುತ್ತಮ ವೇದಿಕೆಯಾಗಿದೆ ಎಂದು ಶಾರುಖ್ ಹೇಳಿದ್ದಾರೆ.
ಬಹುನಿರೀಕ್ಷಿತ ಪಠಾಣ್ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕಾಣಿಸಿಕೊಂಡಿರುವುದು ಒಂದು ವರ್ಗದ ಆಕ್ರೋಶಕ್ಕೆ ಗುರಿಯಾಗಿದ್ದು, ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ.