ಬಿಕಿನಿ ಹಾಕಿದ್ರೂ ಸಹಿಸಲ್ಲ, ಹಿಜಾಬ್ ಧರಿಸಿದ್ರೂ ಸಮಸ್ಯೆ ಇವರಿಗೆ: 'ಪಠಾಣ್' ವಿವಾದಕ್ಕೆ ನುಸ್ರತ್ ಪ್ರತಿಕ್ರಿಯೆ
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ ಪ್ರತಿಕ್ರಿಯಿಸಿದ್ದಾರೆ.
Published: 17th December 2022 09:19 AM | Last Updated: 17th December 2022 09:19 AM | A+A A-

ನುಸ್ರತ್ ಜಹಾನ್
ಮುಂಬೈ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಟಿವಿ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ಜನರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ, ಮಹಿಳೆಯರು ಹಿಜಾಬ್ ಧರಿಸಿದರೆ ಅವರಿಗೆ ಸಮಸ್ಯೆ, ಮಹಿಳೆಯರು ಬಿಕಿನಿ ತೊಟ್ಟರೂ ಅವರಿಗೆ ಸಮಸ್ಯೆಯಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದು ಯಾರೊಬ್ಬರ ಸಿದ್ಧಾಂತದ ವಿಚಾರವಲ್ಲ. ಬದಲಾಗಿ ಇದು ಅಧಿಕಾರದಲ್ಲಿರುವ ಪಕ್ಷವೊಂದು ಜನರ ಮನಸ್ಸಿನಲ್ಲಿ ಇಂತಹ ತಪ್ಪು ವಿಚಾರ ಹಾಕಲು ಯತ್ನಿಸುತ್ತಿದೆ. ಅಂತಹ ಚಿತ್ರವನ್ನು ರಚಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಅವರು ಮಾಡುತ್ತಿರುವುದು ಆಧ್ಯಾತ್ಮಿಕ, ಧಾರ್ಮಿಕ ಕಾಳಜಿಯಿಂದಲ್ಲ. ಬದಲಾಗಿ ಇದೊಂದು ಕೇವಲ ಯೋಜಿತ ಪಿತೂರಿ. ಅದಕ್ಕಾಗಿಯೇ ಅವರು ಸಂಸ್ಕೃತಿ ಹಾಗೂ ಬಿಕಿನಿ ಧರಿಸಿದ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹಣಿದಿದ್ದಾರೆ.
ಅವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ, ಹೆಂಗಸರು ಹಿಜಾಬ್ ತೊಟ್ಟರೆ ಅವರಿಗೆ ಸಮಸ್ಯೆ ಇದೆ, ಮಹಿಳೆಯರು ಬಿಕಿನಿ ತೊಟ್ಟರೆ ಅವರಿಗೆ ಸಮಸ್ಯೆ ಇದೆ. ಇವರೆಲ್ಲರೂ ಭಾರತದ ಆಧುನಿಕ ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುತ್ತಿದ್ದಾರೆ.
ನಾವೇನು ಮಾಡಬೇಕೆಂದು ಹೇಳುವ ಮೂಲಕ ನಮ್ಮ ಜೀವನವನ್ನು ನಿಯಂತ್ರಿಸುತ್ತಾರೆ. ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ.
ಇತ್ತೀಚೆಗೆ ಯಾವುದನ್ನು ಹೊಸ, ಅಭಿವೃದ್ಧಿ ಹೊಂದಿದ ಭಾರತ ಎಂದು ಕರೆಯುತ್ತಾರೋ ಅದು ಬಹಳ ಭಯಾನಕವಾಗಿದೆ, ಮುಂದಿನ ದಿನಗಳಲ್ಲಿ ಅದು ನಮ್ಮೆಲ್ಲರನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ಯೋಚಿಸಿ ನನಗೆ ಭಯವಾಗುತ್ತಿದೆ ಎಂದಿದ್ದಾರೆ.