ಎಂಪೈರ್ ಮ್ಯಾಗಜೀನ್‌ನ '50 ಸಾರ್ವಕಾಲಿಕ ಶ್ರೇಷ್ಠ ನಟರ' ಪಟ್ಟಿಯಲ್ಲಿ ನಲ್ಲಿ ಶಾರುಖ್ ಖಾನ್ ಏಕೈಕ ಭಾರತೀಯ!
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ, 2018ರಲ್ಲಿ ಬಿಡುಗಡೆಗೊಂಡ ಜೀರೋ ಚಿತ್ರ ಸೋತರೂ, ಮುಂಬರುವ ಚಿತ್ರ ಪಠಾಣ್ ಹಲವು ವಿವಾದ ಎದುರಿಸುತ್ತಿದ್ದರೂ ಎಂಪೈರ್ ಮ್ಯಾಗಜಿನ್ ಬಿಡುಗಡೆ ಮಾಡಿದ 'ಸಾರ್ವಕಾಲಿಕ 50 ಶ್ರೇಷ್ಠ ನಟರ' ಪಟ್ಟಿಯಲ್ಲಿ ಶಾರುಖ್ ಖಾನ್ ಸ್ಥಾನ ಪಡೆದಿದ್ದಾರೆ.
Published: 21st December 2022 10:01 AM | Last Updated: 21st December 2022 10:01 AM | A+A A-

ಶಾರೂಕ್ ಖಾನ್
ಮುಂಬೈ: ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ, 2018ರಲ್ಲಿ ಬಿಡುಗಡೆಗೊಂಡ ಜೀರೋ ಚಿತ್ರ ಸೋತರೂ, ಮುಂಬರುವ ಚಿತ್ರ ಪಠಾಣ್ ಹಲವು ವಿವಾದ ಎದುರಿಸುತ್ತಿದ್ದರೂ ಎಂಪೈರ್ ಮ್ಯಾಗಜಿನ್ ಬಿಡುಗಡೆ ಮಾಡಿದ 'ಸಾರ್ವಕಾಲಿಕ 50 ಶ್ರೇಷ್ಠ ನಟರ' ಪಟ್ಟಿಯಲ್ಲಿ ಶಾರುಖ್ ಖಾನ್ ಸ್ಥಾನ ಪಡೆದಿದ್ದಾರೆ.
ಅಷ್ಟೇ ಅಲ್ಲ ಆಯ್ಕೆಯಾದ ಒಬ್ಬನೇ ಒಬ್ಬ ಭಾರತೀಯರಾಗಿದ್ದಾರೆ. ಈ ಪಟ್ಟಿಯಲ್ಲಿ ರಾಬರ್ಟ್ ಡಿ ನಿರೋ, ಟಾಮ್ ಹ್ಯಾಂಕ್ಸ್, ನಟಾಲಿ ಪೋರ್ಟ್‌ಮ್ಯಾನ್, ಬೆಟ್ಟೆ ಡೇವಿಸ್, ಡೆನ್ಜೆಲ್ ವಾಷಿಂಗ್ಟನ್ ಮುಂತಾದ ನಟರು ಸೇರಿದ್ದಾರೆ.
ಈ ಖುಷಿಯ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಶಾರೂಕ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಹಂಚಿಕೊಂಡಿದ್ದಾರೆ, “@iamsrk ಸಾರ್ವಕಾಲಿಕ 50 ಶ್ರೇಷ್ಠ ನಟರ ಎಂಪೈರ್ ಪಟ್ಟಿಯಲ್ಲಿ… ಏಕೈಕ ಭಾರತೀಯ… ಯಾವಾಗಲೂ ನಮಗೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.
ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾನ್ ಮೊದಲ ಹಾಡು ಬೇಷರಂ ರಂಗ್ ಬಿಡುಗಡೆ ಮಾಡಿದಂದಿನಿಂದ ವಿವಾದ ಸುತ್ತಿಕೊಂಡಿದೆ. ಹಾಡಿನಲ್ಲಿ ಶಾರೂಕ್ ಖಾನ್ ಮತ್ತು ದೀಪಿಕಾ ಪಡುಕೋಣೆ ವೇಷಭೂಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹಲವು ರಾಜಕೀಯ ಸಂಘಟನೆಗಳು ಭಾರತದ ವಿವಿಧ ರಾಜ್ಯಗಳಲ್ಲಿ ಚಿತ್ರದ ಬಿಡುಗಡೆಗೆ ಬೆದರಿಕೆ ಹಾಕಿವೆ.
ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ಖಾನ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ದ್ವೇಷವನ್ನು ಉದ್ದೇಶಿಸಿ ಮಾತನಾಡಿದ್ದರು. ಪಠಾಣ್‌ನ ತಯಾರಕರು ತಮ್ಮ ಮುಂಬರುವ ಹಾಡನ್ನು ಜೂಮ್ ಜೋ ಪಠಾನ್ ನ್ನು ನಾಳೆ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.