ಆಸ್ಕರ್ 2023: ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆದ RRRನ 'ನಾಟು ನಾಟು' ಹಾಡು
ಆರ್‌ಆರ್‌ಆರ್ ಮತ್ತು ಚೆಲೋ ಶೋ ಆಸ್ಕರ್ ಪ್ರಶಸ್ತಿ ಪೈಪೋಟಿಗೆ ಒಂದು ಹೆಜ್ಜೆ ಹತ್ತಿರವಾಗಿದೆ. ಗುಜರಾತಿ ಭಾಷೆಯ ಚೆಲ್ಲೋ ಶೋ (ದಿ ಲಾಸ್ಟ್ ಶೋ), ಇದು 2023 ರ ಅಕಾಡೆಮಿ ಪ್ರಶಸ್ತಿಗಳಿಗೆ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿದೆ, ಮುಂದಿನ ವರ್ಷದ ಅಕಾಡೆಮಿ ಪ್ರಶಸ್ತಿಗಳಿಗೆ ಪಟ್ಟಿಯನ್ನು ಅಖೈರು ಮಾಡಲಾಗಿದೆ.
Published: 22nd December 2022 11:13 AM | Last Updated: 22nd December 2022 12:50 PM | A+A A-

ನಾಟು ನಾಟು ಹಾಡಿನ ಸ್ಪೆಪ್
ಆರ್‌ಆರ್‌ಆರ್(RRR) ಮತ್ತು ಚೆಲೋ ಶೋ ಆಸ್ಕರ್ ಪ್ರಶಸ್ತಿ ಪೈಪೋಟಿಗೆ ಒಂದು ಹೆಜ್ಜೆ ಹತ್ತಿರವಾಗಿದೆ. ಗುಜರಾತಿ ಭಾಷೆಯ ಚೆಲ್ಲೋ ಶೋ (ದಿ ಲಾಸ್ಟ್ ಶೋ), ಇದು 2023 ರ ಅಕಾಡೆಮಿ ಪ್ರಶಸ್ತಿಗಳಿಗೆ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿದೆ, ಮುಂದಿನ ವರ್ಷದ ಅಕಾಡೆಮಿ ಪ್ರಶಸ್ತಿಗಳಿಗೆ ಪಟ್ಟಿಯನ್ನು ಅಖೈರು ಮಾಡಲಾಗಿದೆ.
ಈ ಮಧ್ಯೆ, ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್(RRR) ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪಟ್ಟಿಗೆ ಸೇರಿದೆ. ಡಾಕ್ಯುಮೆಂಟರಿ ಫೀಚರ್ ಫಿಲ್ಮ್ ವಿಭಾಗದಲ್ಲಿ ಎರಡು ಚಲನಚಿತ್ರಗಳನ್ನು ಭಾರತದಿಂದ ಅಖೈರು ಮಾಡಲಾಗಿದೆ. ಆಲ್ ದಟ್ ಬ್ರೀತ್ಸ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್. 10 ವಿಭಾಗಗಳಲ್ಲಿ ಅಖೈರು ಮಾಡಿದ ನಮೂದುಗಳ ಪಟ್ಟಿಯನ್ನು ಪ್ರಕಟಿಸಿದೆ. ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಜನವರಿ 24 ರಂದು ಪ್ರಕಟಿಸಲಾಗುವುದು.
Here we go… #NaatuNaatu becomes
ಭಾರತದ ಚೆಲ್ಲೋ ಶೋ ಅರ್ಜೆಂಟೀನಾ, 1985, ಡಿಸಿಷನ್ ಟು ಲೀವ್, ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್, ಕ್ಲೋಸ್ ಮತ್ತು ದಿ ಬ್ಲೂ ಕ್ಯಾಫ್ಟಾನ್ ಸೇರಿದಂತೆ 14 ಇತರ ಚಲನಚಿತ್ರಗಳೊಂದಿಗೆ ಸ್ಪರ್ಧಿಸುತ್ತದೆ.
ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾದ RRR ನ್ನು ವಿವಿಧ ಆಸ್ಕರ್ ವಿಭಾಗಗಳಲ್ಲಿ ಪರಿಗಣಿಸಲು ಅರ್ಜಿ ಸಲ್ಲಿಸಲಾಗಿದೆ. ಇದು ಮುಂದಿನ ತಿಂಗಳು ಗೋಲ್ಡನ್ ಗ್ಲೋಬ್ಸ್‌ನಲ್ಲಿ ಎರಡು ಪ್ರಶಸ್ತಿಗಳಿಗೆ ಸ್ಪರ್ಧಿಸುತ್ತಿದೆ.
95 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾರ್ಚ್ 12, 2023 ರಂದು ಲಾಸ್ ಏಂಜಲೀಸ್‌ನ ಡಾಲಿ ಥಿಯೇಟರ್‌ನಲ್ಲಿ ನಡೆಯಲಿದೆ.