ನಟಿ ಶಿಲ್ಪಾ ಶೆಟ್ಟಿಗೆ ಕೋಟ್ಯಾಂತರ ರೂ. ಆಸ್ತಿ ವರ್ಗಾಯಿಸಿದ ಪತಿ ರಾಜ್ ಕುಂದ್ರಾ
ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ್ದ ಉದ್ಯಮಿ ರಾಜ್ ಕುಂದ್ರಾ ಈಗ ತಮ್ಮ ಪತ್ನಿ ಶಿಲ್ಪಾ ಶೆಟ್ಟಿ ಹೆಸರಿಗೆ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವರ್ಗಾಯಿಸಿದ್ದಾರೆ.
Published: 04th February 2022 12:46 PM | Last Updated: 04th February 2022 01:15 PM | A+A A-

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ
ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ್ದ ಉದ್ಯಮಿ ರಾಜ್ ಕುಂದ್ರಾ ಈಗ ತಮ್ಮ ಪತ್ನಿ ಶಿಲ್ಪಾ ಶೆಟ್ಟಿ ಹೆಸರಿಗೆ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವರ್ಗಾಯಿಸಿದ್ದಾರೆ.
ಸ್ಕೇರ್ ಫೀಟ್ ಇಂಡಿಯಾ.ಕಾಮ್ ನ ಸಂಸ್ಥಾಪಕ ವರುಣ್ ಸಿಂಗ್ ಪ್ರಕಾರ, ಉದ್ಯಮಿ ರಾಜ್ ಕುಂದ್ರಾ ತಮ್ಮ ಪತ್ನಿ, ನಟಿ ಶಿಲ್ಪಾ ಶೆಟ್ಟಿಗೆ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವರ್ಗಾಯಿಸಿದ್ದಾರೆ. ಜುಹುದಲ್ಲಿನ ಓಷನ್ ವ್ಯೂ ಹೆಸರಿನ ಕಟ್ಟಡದಲ್ಲಿನ ಒಟ್ಟು 5 ಫ್ಲಾಟ್ ಗಳನ್ನು ಶಿಲ್ಪಾ ಶೆಟ್ಟಿ ಕುಂದ್ರಾ ಹೆಸರಿಗೆ ಬರೆದಿದ್ದಾರೆ ಎಂದು ದಾಖಲೆ ತೋರಿಸಿದ್ದಾರೆ.
ಇದನ್ನೂ ಓದಿ: ನಟಿ ಶೆರ್ಲಿನ್ ಚೋಪ್ರಾಗೆ 50 ಕೋಟಿ ರೂ. ಮಾನನಷ್ಟ ನೋಟಿಸ್ ಕಳುಹಿಸಿದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ
ಶಿಲ್ಪಾ ಶೆಟ್ಟಿಗೆ ವರ್ಗಾಯಿಸಲಾದ ಒಟ್ಟು ವಿಸ್ತೀರ್ಣ 5,996 ಚದರ ಅಡಿ ಎಂದು ವರುಣ್ ಸಿಂಗ್ ಉಲ್ಲೇಖಿಸಿದ್ದಾರೆ. ಸಿಂಗ್ ಪ್ರಕಾರ, ರಾಜ್ ಮತ್ತು ಶಿಲ್ಪಾ ಇಬ್ಬರ ಪ್ರಸ್ತುತ ವಿಳಾಸವೂ ಇದೇ ಆಗಿದೆ. ಅಲ್ಲದೆ, ಜನವರಿ 24, 2022 ರಂದು ನಡೆದ ನೋಂದಣಿ ವೇಳೆ ಸ್ಟ್ಯಾಂಪ್ ಡ್ಯೂಟಿಗೆ (ಮುದ್ರಾಂಕ ಶುಲ್ಕ) 1.92 ಕೋಟಿ ರೂಪಾಯಿ ಪಾವತಿಸಲಾಗಿದೆ.