
ಶಕ್ತಿಮಾನ್ ಧಾರಾವಾಹಿಯಲ್ಲಿ ಮುಕೇಶ್
ಮುಂಬೈ: ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಮುಂತಾದ ಅಂತಾರಾಷ್ಟ್ರೀಯ ಸೂಪರ್ ಹೀರೋಗಳೇ ತುಂಬಿದ್ದ ಕಾಲದಲ್ಲಿ ಭಾರತದ ಮೊದಲ ಸೂಪರ್ ಹೀರೊ ಎಂದು ಕರೆಸಿಕೊಂಡಿದ್ದು 'ಶಕ್ತಿಮಾನ್'.
ಇದನ್ನೂ ಓದಿ: ಜೂ.10ಕ್ಕೆ ಅಕ್ಷಯ್ ಕುಮಾರ್ ನಟನೆಯ 'ಪೃಥ್ವಿರಾಜ್' ಬಿಡುಗಡೆ
90ರ ದಶಕದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದ 'ಶಕ್ತಿಮಾನ್' ಧಾರಾವಾಹಿ ಸಿನಿಮಾ ಆಗಿ ಮತ್ತೆ ಅವತರಿಸುತ್ತಿದೆ. ಈ ಬಗ್ಗೆ ಸೋನಿ ಪಿಕ್ಚರ್ಸ್ ಇಂಡಿಯಾ ಘೋಷಣೆ ಮಾಡಿದೆ.
ಇದನ್ನೂ ಓದಿ: ಮುಂಬೈ: ಯುವ ನಟಿಯೊಂದಿಗೆ ಹೃತಿಕ್ ರೋಷನ್ ಡೇಟಿಂಗ್?
ಶಕ್ತಿಮಾನ್ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದರ ಮಾಹಿತಿಯನ್ನು ಸಂಸ್ಥೆ ಬಿಟ್ಟುಕೊಟ್ಟಿಲ್ಲ. ಧಾರಾವಾಹಿಯಲ್ಲಿ ಶಕ್ತಿಮಾನ್ ಪಾತ್ರದಲ್ಲಿ ಮಿಂಚಿದ್ದ ನಟ ಮುಕೇಶ್ ಖನ್ನಾ ಅವರ ಭೀಷ್ಮ್ ಇಂಟರ್ ನ್ಯಾಷನಲ್ ಸಂಸ್ಥೆ ಸೋನಿ ಪಿಕ್ಚರ್ಸ್ ಜೊತೆ ಕೈಜೋಡಿಸುತ್ತಿದೆ ಎನ್ನುವುದು ವಿಶೇಷ.
ಇದನ್ನೂ ಓದಿ: ಮುಂಬೈನಲ್ಲಿ ಹೊಸ ಬಂಗಲೆ ನಿರ್ಮಿಸಿ, ಅದಕ್ಕೆ ತಂದೆ ಹೆಸರಿಟ್ಟ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ