
ಫರ್ಹಾನ್ ಅಖ್ತರ್ ಶಿಬಾನಿ ದಾಂಡೇಕರ್
ಮುಂಬೈ: ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲಾದಲ್ಲಿ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಮದುವೆ ಸಮಾರಂಭದಲ್ಲಿ ಫರ್ಹಾನ್ ಕಪ್ಪು ಬಣ್ಣದ ಸೂಟ್ ಧರಿಸಿದ್ದರೆ, ಶಿಬಾನಿ ಕೆಂಪು ಬಣ್ಣದ ಗೌನ್ ತೊಟ್ಟಿದ್ದರು.
ಇಂದು ನಡೆದ ಮದುವೆ ಸಮಾರಂಭದಲ್ಲಿ ನಟ ಹೃತಿಕ್ ರೋಷನ್, ರಾಕೇಶ್ ರೋಷನ್, ರಿಯಾ ಚಕ್ರವರ್ತಿ, ಸತೀಶ್ ಶಾ ಮತ್ತು ಅಶುತೋಷ್ ಗೋವಾರಿಕರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ನಿನ್ನೆ ಫರ್ಹಾನ್ ಮತ್ತು ಶಿಬಾನಿ ಅವರ ಹಲ್ದಿ ಮತ್ತು ಮೆಹೆಂದಿ ಸಮಾರಂಭ ನಡೆದಿದ್ದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಫರ್ಹಾನ್ ಅಖ್ತರ್ ಇದಕ್ಕೂ ಮೊದಲು ಕೇಶ ವಿನ್ಯಾಸಕಿ ಅಧುನಾ ಭಬಾನಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ 16 ವರ್ಷಗಳ ಸುದೀರ್ಘ ದಾಂಪತ್ಯದ ನಂತರ ದಂಪತಿ ದೂರವಾಗಿದ್ದರು.