ನನಗೆ ಈ ವರ್ಷ ಪೊಲೀಸ್ ದೂರುಗಳು, ಎಫ್ಐಆರ್ ಕಡಿಮೆಯಾಗಲಿ, ಪ್ರೇಮ ಪತ್ರ ಜಾಸ್ತಿಯಾಗಲಿ: ನಟಿ ಕಂಗನಾ
ಕಳೆದ ವರ್ಷ ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಅನೇಕ ಬಾರಿ ಪೊಲೀಸ್ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದ ಬಾಲಿವುಡ್ ನಟಿ ಕಂಗನಾ ರನೌತ್ ಅವರು, ಈ ವರ್ಷ ಇದೆಲ್ಲದರಿಂದ ದೂರ ಇದ್ದು,...
Published: 01st January 2022 06:45 PM | Last Updated: 01st January 2022 06:45 PM | A+A A-

ಕಂಗನಾ ರನೌತ್
ಮುಂಬೈ: ಕಳೆದ ವರ್ಷ ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಅನೇಕ ಬಾರಿ ಪೊಲೀಸ್ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದ ಬಾಲಿವುಡ್ ನಟಿ ಕಂಗನಾ ರನೌತ್ ಅವರು, ಈ ವರ್ಷ ಇದೆಲ್ಲದರಿಂದ ದೂರ ಇದ್ದು, ಪ್ರೀತಿಯನ್ನು ಬಯಸುವುದಾಗಿ ಹೇಳಿದ್ದಾರೆ.
ಹೌದು ಕಂಗನಾ ರನೌತ್ ಅವರು 2022ರ ಹೊಸವರ್ಷದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಪೊಲೀಸ್ ದೂರುಗಳು ಮತ್ತು ಎಫ್ಐಆರ್ಗಳು ಕಡಿಮೆ ಮಾಡಿಕೊಳ್ಳುವುದಾಗಿ ಮತ್ತು ಹೆಚ್ಚಿನ ಪ್ರೇಮ ಪತ್ರಗಳನ್ನು ಬಯಸುವುದಾಗಿ ಹೇಳಿದ್ದಾರೆ.
ಇದನ್ನು ಓದಿ: ರೈತರ ವಿರುದ್ಧ ಪೋಸ್ಟ್ ಪ್ರಕರಣ: ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಕಂಗನಾ
ಇನ್ಸ್ಟಾಗ್ರಾಮಿನಲ್ಲಿ ತಿರುಪತಿಗೆ ಸಮೀಪವಿರುವ ರಾಹುಕೇತು ದೇವಾಲಯಲ್ಲಿ ಪೂಜೆ ಸಲ್ಲಿಸುತ್ತಿರುವ ಫೋಟೋವನ್ನು ಹಮಚಿಕೊಂಡಿದ್ದು, ಪ್ರಪಂಚದಲ್ಲಿರುವುದು ಇದೊಂದು ರಾಹು ಕೇತು ದೇವಾಲಯ. ಇದು ತಿರುಪತಿ ಬಾಲಾಜಿ ದೇವಾಲಯಕ್ಕೆ ಸಮೀಪದಲ್ಲಿದೆ. ಅಲ್ಲಿ ಕೆಲವು ಪೂಜೆಗಳನ್ನು ಮಾಡಲಾಯಿತು. ಐದು ಧಾತುರೂಪದ ಲಿಂಗಗಳಲ್ಲಿ, ವಾಯೋ (ಗಾಳಿಯ ಅಂಶ)ಲಿಂಗಾ ಕೂಡ ಇಲ್ಲಿ ನೆಲೆಗೊಂಡಿದೆ. ಸಾಕಷ್ಟು ಗಮನಾರ್ಹ ಸ್ಥಳವಾಗಿದೆ ಎಂದು ಹೇಳಿದ್ದಾರೆ.
ನಾನು ಇಲ್ಲಿಗೆ ಶತ್ರುಗಳಿಂದ ಕರುಣೆಯನ್ನು ಬಯಸಲು ಹೋಗಿದ್ದೆ. ಈ ವರ್ಷ ನನಗೆ ಕಡಿಮೆ ಪೊಲೀಸ್ ದೂರುಗಳು ಮತ್ತು ಎಫ್ಐಆರ್ ಗಳು ಬರಲಿ, ಹೆಚ್ಚು ಪ್ರೇಮಪತ್ರಗಳು ಬರಲಿ.. ಜೈ ರಾಹು, ಕೇತು ಜೀ ಕೀ…ಎಂದು ಶೇರ್ ಮಾಡಿದ್ದಾರೆ.
ಕಂಗನಾ ಧಡಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಇದು ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ತೇಜಸ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ನಮ್ಮ ದೇಶವನ್ನು ಬಾಹ್ಯ ಶಕ್ತಿಗಳಿಂದ ಸುರಕ್ಷಿತವಾಗಿಡುವಲ್ಲಿ ಮಹಿಳಾ ಪೈಲಟ್ಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ಈ ಚಿತ್ರ ಆಧರಿಸಿದೆ.