
ಬಾಲಿವುಡ್ ನಟಿ ದಿಶಾ ಪಟಾನಿ
ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಮತ್ಸ್ಯೆ ಕನ್ಯೆಯಾಗಿ ಕಾಣಿಸಿಕೊಳ್ಳುವುದರ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಹೌದು. ಬಿಕಿನಿ ಧರಿಸಿ ಸಮುದ್ರ ತೀರದಲ್ಲಿ ವಿಹರಿಸುತ್ತಿರುವ ಫೋಟೋವೊಂದನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹೊಸ ವರ್ಷಾಚರಣೆಗೆ ಗೆಳೆಯ ಟೈಗರ್ ಶ್ರಾಫ್ ಜೊತೆಗೆ ಮಾಲ್ಡೀವ್ಸ್ ಗೆ ತೆರಳಿದಾಗ ತಿಳಿ ಗುಲಾಬಿ ಬಣ್ಣದ ಬಿಕಿನಿಯಲ್ಲಿ ಕಡಲ ಕಿನಾರೆಯಲ್ಲಿ ಮಲಗಿರುವ ಫೋಟೋವನ್ನು ದಿಶಾ ಫೋಸ್ಟ್ ಮಾಡಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸುಮಾರು 17 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.